Home ಕರಾವಳಿ ರಕ್ತಕೊಟ್ಟು ಬಾಂಧವ್ಯ ಕಟ್ಟು: SDPI ಆಯೋಜಿಸಿದ್ದ ಯಶಸ್ವಿ ರಕ್ತದಾನ ಮಾಸಾಚರಣೆ, 1885 ಯುನಿಟ್ ರಕ್ತ ಸಂಗ್ರಹ

ರಕ್ತಕೊಟ್ಟು ಬಾಂಧವ್ಯ ಕಟ್ಟು: SDPI ಆಯೋಜಿಸಿದ್ದ ಯಶಸ್ವಿ ರಕ್ತದಾನ ಮಾಸಾಚರಣೆ, 1885 ಯುನಿಟ್ ರಕ್ತ ಸಂಗ್ರಹ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಜಿಲ್ಲಾದ್ಯಂತ ಒಂದು ತಿಂಗಳುಗಳ ಕಾಲ ರಕ್ತಕೊಟ್ಟು ಬಾಂಧವ್ಯ ಕಟ್ಟು ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ರಕ್ತದಾನ ಮಾಸಾಚರಣೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಫೆಬ್ರವರಿ 22 ರಿಂದ ಮಾರ್ಚ್ 19ರವರೆಗೆ ನಾಲ್ಕು ಭಾನುವಾರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಪ್ಪತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಯಿತು. ರೆಡ್ ಕ್ರಾಸ್ ಸೊಸೈಟಿ, ಫಾದರ್ ಮುಲ್ಲರ್ಸ್, ಎ. ಜೆ, ಯೆನಪೋಯ, ಕೆಎಂಸಿ ಕಣಚೂರು, ಶ್ರೀನಿವಾಸ, ಮೆಡಿಕಲ್ ಕಾಲೇಜ್ , ವೆನ್ಲಾಕ್ ಆಸ್ಪತ್ರೆ ಮತ್ತು ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಬ್ಯಾಂಕ್ ಗಳ ಸಹಯೋಗದಲ್ಲಿ ನಡೆದ ಶಿಬಿರಗಳಲ್ಲಿ ಒಟ್ಟು 1885 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.


ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಉಲ್ಪಣಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜ ಮುಖಿ ಸೇವೆಗಳಿಗೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ಸಮಿತಿಯ ತೀರ್ಮಾನದಂತೆ ತುರ್ತಾಗಿ ಜಿಲ್ಲಾದ್ಯಂತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು. ಈ ಪುಣ್ಯಕಾರ್ಯದಲ್ಲಿ ನಮ್ಮ ಕರೆಯನ್ನು ಸ್ವೀಕರಿಸಿ ಪಕ್ಷ ,ಜಾತಿ, ಮತಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಪಾಲ್ಗೊಂಡು ಸ್ವಯಂಪ್ರೇರಿತ ರಕ್ತದಾನ ಮಾಡಿದರು. ತಿಂಗಳ ಕಾಲ ನಡೆದ ಈ ಅಭಿಯಾನವನ್ನು ಯಶಸ್ವಿಗೊಳಿಸಿದ ಎಲ್ಲಾ ರಕ್ತದಾನಿಗಳಿಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಹ್ರದಯೀ ನಾಗರಿಕರಿಗೂ, ಪಕ್ಷದ ಕಾರ್ಯಕರ್ತರಿಗೂ, ನಾಯಕರಿಗೂ ಮೆಡಿಕಲ್ ಕಾಲೇಜು ಮತ್ತು ವಿವಿಧ ಬ್ಲಡ್ ಬ್ಯಾಂಕ್ ಗಳ ಆಡಳಿತ ಮಂಡಳಿಗೂ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪರವಾಗಿ ಕಾರ್ಯಕ್ರಮದ ಸಂಯೋಜಕರಾದ ಸುಹೈಲ್ ಖಾನ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Join Whatsapp
Exit mobile version