Home ಕರಾವಳಿ ಬದ್ರಿಯಾ ಜುಮಾ ಮಸೀದಿ ಅಲಾಡಿ,  ಹೆಲ್ಪ್ ಲೈನ್ ಆಲಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ...

ಬದ್ರಿಯಾ ಜುಮಾ ಮಸೀದಿ ಅಲಾಡಿ,  ಹೆಲ್ಪ್ ಲೈನ್ ಆಲಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಮತ್ತು ಬದ್ರಿಯಾ ಜುಮಾ ಮಸೀದಿ ಆಲಾಡಿ ಹಾಗೂ ಹೆಲ್ಪ್ ಲೈನ್ ಆಲಾಡಿ ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಮರ್ಹೂಂ ಸಿರಾಜ್ ಆಲಾಡಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಭಾನುವಾರ ಬದ್ರಿಯಾ ಜುಮಾ ಮಸೀದಿ ಆಲಾಡಿಯಲ್ಲಿ ನಡೆಯಿತು.

ಸಲೀಂ ಆಲಾಡಿ (ಅಧ್ಯಕ್ಷರು,ಜುಮಾ ಮಸೀದಿ ಆಲಾಡಿ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಲೀಂ ಅರ್ಶದಿ (ಖತೀಬರು,ಜುಮಾ ಮಸೀದಿ ಆಲಾಡಿ) ದುಃವಾಶೀರ್ವಚನ ಹಾಗೂ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಗ್ಲೋರಿಯಾ ( ಬ್ಲಡ್ ಬ್ಯಾಂಕ್ ಅಧಿಕಾರಿ ಯೇನೆಪೋಯ ಆಸ್ಪತ್ರೆ),ಯೂಸುಫ್ ಶಾರದಾ ನಗರ, ಅಕ್ಬರ್ ಅಲಿ ಮದನಿ,ರಹಿಮಾನ್ ಉದ್ದೋಟ್ಟು, ನಾಸಿರ್ ಆರ್.ಬಿ (ಕಾರ್ಯನಿರ್ವಾಹಕರು ಬ್ಲಡ್ ಹೆಲ್ಪ್ ಕರ್ನಾಟಕ (ರಿ) ಹಾಗೂ ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 37 ಮಂದಿ ರಕ್ತದಾನ ಮಾಡಿ ಜೀವದಾನಿಗಳಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ  ಯೇನಪೋಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಕಾರ್ಯಕ್ರಮವನ್ನು ಅನ್ವರ್ ಬೇಂಕ್ಯ ಸ್ವಾಗತಿಸಿ ನಿರೂಪಿಸಿದರು.

Join Whatsapp
Exit mobile version