ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿರುವ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ” ರಾಮ ತನ್ನ ಪತ್ನಿ ಸೀತೆ ಮಾತೆಗೋಸ್ಕರ ಒಂದೂವರೆ ದಶಕಗಳ ಕಾಲ ಹೋರಾಟ ಮಾಡಿದ್ದ. ಮೋದಿ ತನ್ನ ಹೆಂಡತಿಯನ್ನು ಕೈ ಬಿಟ್ಟ ವಿಚಾರದಲ್ಲಿ ಪ್ರಸಿದ್ದಿಯಾಗಿದ್ದಾರೆ. ಅಂತಹ ಮೋದಿಯನ್ನು ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜೆ ಮಾಡ್ತಾರಾ? ರಾಮ ಭಕ್ತರಾದ ನಾವು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೆ ಮೋದಿಗೆ ಹೇಗೆ ಅವಕಾಶ ಕೊಡಲಿ?” ಎಂದು ಪ್ರಶ್ನಿಸಿದ್ದಾರೆ.