ನವದೆಹಲಿ: ಬಿಜೆಪಿಯ ಮಾಜಿ ರಾಜ್ಯ ಸಭಾ ಸದ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ಮೋದಿ ವಿರುದ್ಧ ಮತ್ತೆ ಟ್ವೀಟ್ ಮೂಲಕ ಕುಟುಕಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ ಈಗ ಭಾರೀ ವೈರಲ್ ಆಗಿದೆ. ನಾಳೆ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಯಾವೆಲ್ಲಾ ಭರವಸೆ ನೀಡುತ್ತಾರೆ ಎಂಬುದನ್ನು ಮೊದಲೇ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
2022ರ ಆಗಸ್ಟ್ 15ರೊಳಗೆ ಈ ಕೆಳಗಿನವುಗಳನ್ನು ಸಾಧಿಸುವುದಾಗಿ 2017ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಆಶ್ವಾಸನೆ ನೀಡಿದ್ದರು.
-ಪ್ರತಿ ವರ್ಷ 2 ಕೋಟಿ ಹೊಸ ಉದ್ಯೋಗಗಳು
-ಎಲ್ಲರಿಗೂ ಮನೆ
-ರೈತರ ಆದಾಯ ದುಪ್ಪಟ್ಟು
-ಬುಲೆಟ್ ರೈಲು
ಈ ವರ್ಷದ ಸ್ವಾತಂತ್ರ್ಯ ದಿನದ ಆಶ್ವಾಸನೆಗಳು ಏನೇನು?
ಇದಕ್ಕೆ ಟ್ವೀಟ್ ಮೂಲಕ ನವಜ್ಯೋತ್ ಬೋರಾ ಎಂಬವರು, ನೀವು ಬಿಜೆಪಿಯಲ್ಲಿ ಇದ್ದೀರಿ ಸ್ವಾಮಿ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಸ್ವಾಮಿ, ಹೌದು ನಾನು ಬಿಜೆಪಿ ಪಕ್ಷದಲ್ಲಿದ್ದೇನೆ. ಬಿಜೆಪಿ ಸರಕಾರದಲ್ಲಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಸಂಸದರು ಗೆಲ್ಲಲು ಸಹಾಯ ಮಾಡುತ್ತಾರೆ. ಆ ಮೂಲಕ ಸರಕಾರ ರಚನೆಯಾಗುತ್ತದೆ. ಆದ್ದರಿಂದ ಜನರ ನೇರ ಸಂಪರ್ಕದಲ್ಲಿ ಅವರಿಗೆ ಉತ್ತರಿಸಬೇಕಾಗಿರುವ ಕಾರ್ಯಕರ್ತರಿಗೆ ಸರಕಾರವು ಜವಾಬ್ದಾರವಾಗಿರಬೇಕು. ನಿಮ್ಮ ಪ್ರಜಾಪ್ರಭುತ್ವವು ನೆಹರೂ, ಇಂದಿರಾ, ಟಿಡಿಕೆಗಳಿಂದ ಅವನತಿ ಹೊಂದಿರುವುದಾಗಿದೆ ಎಂದು ಬರೆದಿದ್ದಾರೆ.
ಬಸವರಾಜ ಧಾರವಾಡಕರ್ ಎಂಬವರು ಪ್ರತಿಕ್ರಿಯಿಸಿ, ಈ ಎಲ್ಲ ಯೋಜನೆಗಳು ತಡವಾಗಲು ಕೊರೋನಾ ಸಾಂಕ್ರಾಮಿಕ ಕಾರಣ ಎನ್ನುವುದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸ್ವಾಮಿ, ಯಾವ ಯೋಜನೆಗಳು? 2017ರಿಂದ ಒಂದೇ ಸಮನೆ ಜಿಡಿಪಿ ಬೆಳವಣಿಗೆಯು 3.1%ಕ್ಕೆ ಕುಸಿದಿದೆ? ಈಗಲೂ 209- 20ರಲ್ಲೂ ಅದು ಮತ್ತೆ ಕಾಲು ಕುಸಿತ ಕಂಡಿದೆ. ಇದನ್ನು ಯೋಜನೆ ಎನ್ನುತ್ತಾರೆಯೇ? ಒಟ್ಟಾರೆ ಇನ್ನೂ ಸುಳಿವಿಲ್ಲದ್ದಾಗಿದೆ ಎಂದು ಹೇಳಿದ್ದಾರೆ.
ಅಭಿಷೇಕ್ ಎಂಬವರು, ನಿಜವಾಗಿಯೂ ನಿಮ್ಮನ್ನು ಹಣಕಾಸು ಸಚಿವರ ಸ್ಥಾನದಲ್ಲಿ ಬದಲಿ ಸ್ಥಾಪಿಸಬೇಕು ಎಂದು ಹೇಳಿದ್ದಾರೆ.
ಆಗ ಉತ್ತರಿಸಿರುವ ಸ್ವಾಮಿ, ಮೋದಿಯವರನ್ನು ಬದಲಿಸದವರೆಗೆ ನಾನು ಅಲ್ಲಿರುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, ಆತ ಏನೂ ಮಾಡಿಲ್ಲ ಎಂದು ಹೇಳಲು ನೀವು ಪ್ರಯತ್ನಿಸುತ್ತಿದ್ದೀರಾ? ಕೋವಿಡ್ ಇತ್ಯಾದಿಗಳ ಹೊರತಾಗಿ ಭಾರತವು ಯಾವುದೇ ಸಾಧನೆಯನ್ನು ಮಾಡಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿ ಉತ್ತರಿಸಿ, 2017ರಿಂದ ಪ್ರತೀ ಮೂರು ತಿಂಗಳಿಗೂ ಜಿಡಿಪಿ ಮಟ್ಟಿಇಳಿಯುತ್ತಲೇ ಬಂದಿದೆ. 2019-20 ನಾಲ್ಕನೆ ಕಾಲು ವರುಷದಲ್ಲಿ ಬೆಳವಣಿಗೆ ದರವು 3.15ಕ್ಕೆ ಕುಸಿದಿದೆ. ವಾರ್ಷಿಕ ಬೆಳವಣಿಗೆ ದರವು ನೆಹರೂರ ಕಾಲಕ್ಕಿಂತ ಕಡಿಮೆಯಿದೆ ಎಂದು ಹೇಳಿದ್ದಾರೆ.
ಸೂರಜ್ ಶರ್ಮಾ ಎಂಬವರು ಪ್ರತಿಕ್ರಿಯಿಸಿ, ನನ್ನ ಪ್ರಕಾರ ನೀವು ಒಬ್ಬ ದೊಡ್ಡ ನಾಯಕರು. ನಿಮಗೆ ಸಂಪುಟದಲ್ಲಿ ಒಂದು ಉತ್ತಮ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.
ಆಗ ಸ್ವಾಮಿ, ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲದಿದ್ದ ಸನ್ನಿವೇಶಗಳನ್ನು 2014ರಲ್ಲಿ ನನ್ನನ್ನು ಬಳಸಿಕೊಂಡು ನಿವಾರಿಸಿಕೊಂಡು ಮೋದಿ ಪ್ರಧಾನಿ ಆದರು. ಹಾಗೂ ಆಗಲೆ ನನ್ನ ಬೆನ್ನಿಗೆ ಇರಿದರು. 2014ರಿಂದಲೂ ಅವರು ನನಗೆ ತೊಂದರೆ ಕೊಡುತ್ತಲೇ ಇದ್ದಾರೆ; ಆದರೆ ಅದರಿಂದ ಆಗುವುದು ಏನೂ ಇಲ್ಲ ಎಂದು ಬರೆದಿದ್ದಾರೆ.
ಪ್ರದೀಪ್ ಮಾಥುರ್ ಎಂಬವರು ಟ್ವೀಟ್ ಮಾಡಿ, ಮಿಸ್ಟರ್ ಸ್ವಾಮಿ, ಯಾರು ನೀವು ಯಾರನ್ನು ಕೇಳುತ್ತಿದ್ದೀರಿ? ನಮಗೆ ಹೇಳಿ ನೀವು, ನೀವು ಸರಕಾರದ ಜೊತೆಗೇ ಇದ್ದೀರಿ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಪೂರ್ಣ ವಿಫಲವಾದರೂ ಆ ಪಕ್ಷವನ್ನು ಹೊಗಳುತ್ತಿರುವವರು ನೀವು. ಒಳ್ಳೆಯ ಉಡುಗೆಯ ಅಭಿರುಚಿ, ಮಾತಿನ ಮಂಟಪ ಕಟ್ಟುವ ನಡಿಗೆ, ಉತ್ತಮ ಶೂಗಳು, ಹಾಗೂ ರಾಯಭಾರಿತ್ವದಲ್ಲಿ ಸ್ವಲ್ಪ ಪ್ರಸಾದನ ಪ್ರಯತ್ನ ಸಕಾರಾತ್ಮಕವೆನ್ನಬೇಕೆ? ಎಂದು ಕುಟುಕಿದ್ದಾರೆ.
ಆಗ ಸುಬ್ರಮಣಿಯನ್ ಸ್ವಾಮಿ, ಪಕ್ಷ ಸೋತಿಲ್ಲ. ಆದರೆ ಮೋದಿಯವರು ಆರ್ಥಿಕ ವಿಷಯದಲ್ಲಿ ಮತ್ತು ಚೀನಾ ವಿಷಯದಲ್ಲಿ ಸೋತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.