Home ಟಾಪ್ ಸುದ್ದಿಗಳು ತಮಿಳುನಾಡು: ಯುವಕನನ್ನು ಲಾಠಿಯಿಂದ ಥಳಿಸಿ ಕೊಂದ ಸಬ್ ಇನ್ಸ್‌ಪೆಕ್ಟರ್

ತಮಿಳುನಾಡು: ಯುವಕನನ್ನು ಲಾಠಿಯಿಂದ ಥಳಿಸಿ ಕೊಂದ ಸಬ್ ಇನ್ಸ್‌ಪೆಕ್ಟರ್

ಚೆನ್ನೈ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇಲಂ ಎಡಪ್ಪಾಡಿ ಮೂಲದ 40 ವರ್ಷದ ವ್ಯಕ್ತಿಯನ್ನು ಲಾಠಿಯಿಂದ ಥಳಿಸಿ ಕೊಂದ ಘಟನೆ ಸೇಲಂ ಪಪ್ಪಾನೈಕೆನ್ ಪಟ್ಟಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಮೃತಪಟ್ಟ ಮುರುಗೇಶನ್ ಮತ್ತು ಆತನ ಜೊತೆಗಿದ್ದ ಗೆಳೆಯರನ್ನು ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆಗಾಗಿ ತಡೆದಾಗ ಪೊಲೀಸರು ಮತ್ತು ಯುವಕರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ವ್ಯಕ್ತಿಯನ್ನು ಲಾಠಿಯಿಂದ ಮಾರಣಾಂತಿಕವಾಗಿ ಥಳಿಸಿದ ಹಿನ್ನೆಲೆಯಲ್ಲಿ ಆತ ಮೃತಪಟ್ಟಿದ್ದಾನೆ. ಪೊಲೀಸ್ ಲಾಠಿಯಿಂದ ಹಿಗ್ಗಾಮಗ್ಗಾ ಥಳಿಸಿದಾಗ ಪ್ರಜ್ಞೆ ತಪ್ಪಿ ಬಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದರೂ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸ್ ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಸೇಲಂ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ವೀಡಿಯೋ ವೀಕ್ಷಿಸಿ…

https://twitter.com/mannar_mannan/status/1407578602061791237
Join Whatsapp
Exit mobile version