ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಯಶ್ ಪಾಲ್ ಸುವರ್ಣ

Prasthutha|

ಉಡುಪಿ: ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ ಎಂದು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಪಕ್ರರಣ ಸಂಬಂಧ ರಾಜ್ಯ ಬಿಜೆಪಿ ನಾಯಕರು ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಕ್ಕಳಾಟ ಎಂದಿದ್ದಾರೆ. ಅವರ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟನಾ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಿಸ್ಟೇಕ್ ಆಗಿ ಕ್ಯಾಮೆರಾ ಬಂತು ಅಂತಾ ಹೇಳಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ. ನಿನ್ನೆ ಖುಷ್ಬೂ ಅಕ್ಕನಿಗೆ ಸ್ವಲ್ಪ ಗಡಿಬಿಡಿಯಾಗಿದೆ. ಅವರು ಹಿಡನ್ ಕ್ಯಾಮೆರಾ ಇರಲಿಲ್ಲ ಅಂತ ಹೇಳಿದರು. ನಾವು ಹಿಡನ್ ಕ್ಯಾಮೆರಾ ಇತ್ತು ಅಂತಾ ಹೇಳಿಲ್ಲ. ಅವರಿಗೆ ಮಾಹಿತಿ ನೀಡಿದವರು ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

Join Whatsapp