ಆತೂರು: 2023-24 ನೆ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಬದ್ರಿಯ ಮಹಿಳಾ ಕಾಲೇಜ್ ಆತೂರು ಇಲ್ಲಿಯ ವಿಧ್ಯಾರ್ಥಿನಿಯರು ಮೂವರು ವಿಧ್ಯಾರ್ಥಿನಿಯರು ವಿಶೇಷ ಶ್ರೇಣಿಯಲ್ಲಿ ಮತ್ತು ಉಳಿದ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು ಒಂಬತ್ತು ವಿಧ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಆ ಪೈಕಿ 3 ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಯೂಸುಫ಼್ ಕೊಇಲರವರ ಪುತ್ರಿ ಫ಼ಾತಿಮತ್ ಖೈಮ 553(92.16), ನಝೀರ್ ಕೊಇಲರವರ ಪುತ್ರಿ ಫ಼ಾತಿಮತ್ ಅಕ್ಮಲ 532(88.66),ಅಬ್ದುಲ್ ಶರೀಫ಼್ ಕೆಮ್ಮಾರ ರವರ ಪುತ್ರಿ ಆಶಿಕ 523 (87.16) ಅಂಕ ಗಳಿಸಿರುತ್ತಾರೆ. ಹಾಗು ಎಲ್ಲಾ ವಿಧ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆದಿದ್ದು ಅತ್ಯುತ್ತಮ ಸಾಧನೆಯನ್ನು ಮಾಡಿದಂತಹ ಎಲ್ಲಾ ವಿಧ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು ಮತ್ತು ಕಾಲೇಜಿನ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ