Home ಕರಾವಳಿ ಉಪ್ಪಿನಂಗಡಿ ಕಾಲೇಜಿಗೆ ಅಕ್ರಮ ಪ್ರವೇಶ ಆರೋಪ: ಪತ್ರಕರ್ತನ ಕ್ಯಾಮರಾದಿಂದ ವಿಡಿಯೋ ಡಿಲಿಟ್ ಮಾಡಿಸಿದ ವಿದ್ಯಾರ್ಥಿಗಳು

ಉಪ್ಪಿನಂಗಡಿ ಕಾಲೇಜಿಗೆ ಅಕ್ರಮ ಪ್ರವೇಶ ಆರೋಪ: ಪತ್ರಕರ್ತನ ಕ್ಯಾಮರಾದಿಂದ ವಿಡಿಯೋ ಡಿಲಿಟ್ ಮಾಡಿಸಿದ ವಿದ್ಯಾರ್ಥಿಗಳು

ಉಪ್ಪಿನಂಗಡಿ: ಉಪ್ಪಿನಂಗಡಿ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದ ವರದಿಗಾರನನ್ನು ತಡೆದ ವಿದ್ಯಾರ್ಥಿಗಳು, ಆತ ಚಿತ್ರೀಕರಿಸಿದ ವಿಡಿಯೋವನ್ನು ಕ್ಯಾಮರಾದಿಂದ ಡಿಲಿಟ್ ಮಾಡಿಸಿದ ಘಟನೆ ಗುರುವಾರ ನಡೆದಿದೆ.
ಕಾಲೇಜಿನ ಕ್ಯಾಂಪಸ್ ಒಳಗೆ ಬಂದು ವಿಡಿಯೋ ಮಾಡಬೇಕಾದರೆ ಅನುಮತಿಯನ್ನು ಪಡೆದಿರಬೇಕು. ಆದರೆ ಇವರು ಯಾವುದೇ ಅನುಮತಿಯನ್ನು ಪಡೆದಿಲ್ಲ. ಆದ್ದರಿಂದ ವಿಡಿಯೋ ಡಿಲೀಟ್ ಮಾಡಿಸಿದ್ದೇವೆ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.


ಆದರೆ ಈಗ ಮಾಧ್ಯಮದಲ್ಲಿ ಪತ್ರಕರ್ತರಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಎನ್ನುವ ರೀತಿಯಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು ಎಂದು ಕಾಲೇಜಿನ ವಿದ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಇತರೆ ಉಪನ್ಯಾಸಕರ ಮುಂದೆಯೇ ವಿಡಿಯೋ ಡಿಲೀಟ್ ಮಾಡಿಸಿದ್ದು, ಯಾವುದೋ ಕೊಠಡಿಯಲ್ಲಿ ಕೂಡಿ ಹಾಕಿಲ್ಲ. ಬದಲಾಗಿ ಕಾಲೇಜಿನ ಕಚೇರಿಯಲ್ಲೇ ಕರೆದುಕೊಂಡು ಕುರ್ಚಿಯಲ್ಲಿ ಕೂರಿಸಿ ವೀಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.


ಈ ಮಧ್ಯೆ ವರದಿಗಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version