Home ಟಾಪ್ ಸುದ್ದಿಗಳು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್‘, ‘ಮೇಡಂ‘ ಎಂದು ಕರೆಯುವಂತಿಲ್ಲ

ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್‘, ‘ಮೇಡಂ‘ ಎಂದು ಕರೆಯುವಂತಿಲ್ಲ

ತಿರುವನಂತಪುರಂ: ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್, ‘ಮೇಡಂ‘ ಎಂದು ಕರೆಯುವಂತಿಲ್ಲ, ಅದರ ಬದಲು ‘ಟೀಚರ್‘ ಎಂದು ಸಂಬೋಧಿಸುವಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ.


‘ಸರ್‘, ‘ಮೇಡಂ‘ ಅನ್ನುವುದಕ್ಕಿಂತ ‘ಟೀಚರ್‘ ಎನ್ನುವ ಪದ ‘ಲಿಂಗ ತಟಸ್ಥ‘ವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಿದೆ. ಅಲ್ಲದೇ ಶಿಕ್ಷಕರು ಕೂಡ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದಿದೆ.


ಆಯೋಗದ ಮುಖ್ಯಸ್ಥರಾದ ಕೆ.ವಿ ಮನೋಜ್ ಕುಮಾರ್ ಹಾಗೂ ಸದಸ್ಯ ಸಿ. ವಿಜಯ್ ಕುಮಾರ್ ಅವರು, ರಾಜ್ಯದ ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ.

Join Whatsapp
Exit mobile version