Home ಟಾಪ್ ಸುದ್ದಿಗಳು ಗಣಿತ ಪರೀಕ್ಷೆ ತಡೆಯಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿ

ಗಣಿತ ಪರೀಕ್ಷೆ ತಡೆಯಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿ

ಚಂಡೀಗಢ: ಗಣಿತ ಪರೀಕ್ಷೆ ನಡೆಯುವುದನ್ನು ತಡೆಯುವುದಕ್ಕಾಗಿ ವಿದ್ಯಾರ್ಥಿಯೊಬ್ಬ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಅಮೃತಸರದ ಖಾಸಗಿ ಶಾಲೆಯೊಂದಕ್ಕೆ ಹುಸಿ ಬಾಂಬ್ ನೆಪ ಬೆದರಿಕೆ ಕರೆಯೊಂದು ಬಂದಿತ್ತು. ಇದರಲ್ಲಿ ವಿದ್ಯಾರ್ಥಿಯ ಪಾತ್ರ ಇರುವುದನ್ನು ಕಂಡು ಪೊಲೀಸರು ನಿಬ್ಬೆರಗಾಗಿದ್ದಾರೆ.

ಸೆಪ್ಟೆಂಬರ್ 16 ರಂದು ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಸಂದೇಶದ ಮೂಲವನ್ನು ವಿದ್ಯಾರ್ಥಿಯ ತಂದೆಯ ಮೊಬೈಲ್ ಫೋನ್‌ನಿಂದ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದು ಅಮೃತಸರದಲ್ಲಿ ಒಂದು ವಾರದಲ್ಲಿ ವರದಿಯಾದ ಎರಡನೇ ಘಟನೆಯಾಗಿದ್ದು, ನಗರದಲ್ಲಿ ಭೀತಿ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ನಗರದ ಶಾಲೆಯೊಂದು ಸೆಪ್ಟೆಂಬರ್ 7 ರಂದು ಬಾಂಬ್ ಬೆದರಿಕೆಯನ್ನು ವರದಿ ಮಾಡಿತ್ತು.

Join Whatsapp
Exit mobile version