ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಗದರಿಸಿ, ಅಪಮಾನಿಸಿ, ಕೆಟ್ಟ ಪದ ಬಳಸಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಅಂತಾರಾಷ್ಟ್ರೀಯ ಶಾಲೆಯ ಅಧ್ಯಕ್ಷರೊಬ್ಬರಿಗೆ ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

- Advertisement -

“ನಿಸ್ಸಂದೇಹವಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಾಗ್ದಂಡಿಸಬಹುದು. ಆದರೆ ಅದು ಅವರ ಕೋಮಲ ಮನಸ್ಸನ್ನು ಛಿದ್ರಗೊಳಿಸುವ ಭಾಷೆಯಲ್ಲಿ ಅಲ್ಲ” ಎಂದು ನ್ಯಾಯಮೂರ್ತಿ ವಿನಯ್ ಜೋಶಿ ಹೇಳಿದ್ದಾರೆ.

ಏಪ್ರಿಲ್ 1, 2022 ರಂದು ಈ ಘಟನೆ ನಡೆದಿದ್ದು. ಆತ್ಮಹತ್ಯೆ ಮಾಡಿಕೊಂಡ ಬಾಲಕ ಹುಡುಗಿಯೊಬ್ಬಳೆಡೆಗೆ ಫುಟ್ ಬಾಲ್ ಅನ್ನು ಅಚಾತುರ್ಯದಿಂದ ಒದ್ದಿದ್ದನು.   ಆತನನ್ನು ʼಸಿಂಬಾಲಿಕ್ ಇಂಟರ್ ನ್ಯಾಶನಲ್ ಸ್ಕೂಲ್ʼನ ಅಧ್ಯಕ್ಷ ಗಣಪತರಾವ್ ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದರು.

- Advertisement -

ಬಾಲಕನಿಗೆ “ನಾಲಾಯಕ್, ಭೂಮಿಗೆ ಭಾರ, ಕೊಳೆಗೇರಿಯಲ್ಲಿ ಬದುಕುವವನು” ಎಂದು ನಿಂದಿಸಿದ್ದರು.

Join Whatsapp
Exit mobile version