ನವದೆಹಲಿ: ಸಹೋದರಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್’ ಗೆ ದೆಹಲಿ ಕೋರ್ಟ್ ಸೋಮವಾರ ಒಂದು ವಾರದ ಅವಧಿಗೆ ಮಧ್ಯಂತರ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
2020ರ ಈಶಾನ್ಯ ದೆಹಲಿ ಗಲಭೆಯ ಪಿತೂರಿ ಪ್ರಕರಣದಲ್ಲಿ ಯುಎಪಿಎಯಡಿ ಜೈಲಿನಲ್ಲಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಮಧ್ಯಂತರ ಜಾಮೀನು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದರು. ಮಧ್ಯಂತರ ಜಾಮೀನು ಡಿಸೆಂಬರ್ 23 ರಂದು ಪ್ರಾರಂಭವಾಗಲಿದ್ದು, ಆದೇಶದ ಪ್ರಕಾರ ಖಾಲಿದ್ ಡಿಸೆಂಬರ್ 30 ರಂದು ಶರಣಾಗಬೇಕು ಎಂದು ತಿಳಿಸಿದೆ.