Home ಟಾಪ್ ಸುದ್ದಿಗಳು ವಿದ್ಯುತ್ ತಗುಲಿ ವಿದ್ಯಾರ್ಥಿ ಮೃತ್ಯು

ವಿದ್ಯುತ್ ತಗುಲಿ ವಿದ್ಯಾರ್ಥಿ ಮೃತ್ಯು

ಮೈಸೂರು:  ಮನೆ ಮುಂದಿನ ಮರಕ್ಕೆ ವಿದ್ಯುತ್ ತಂತಿ ತಾಗಿದ್ದ ಪರಿಣಾಮ, ಮರದ ಪಕ್ಕದಲ್ಲಿದ್ದ ಬಾಲಕನಿಗೆ  ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆ ಆರ್ ನಗರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಮಳಲಿ ಗ್ರಾಮದ ಮನೋಜ್ (16) ಮೃತಪಟ್ಟ ಬಾಲಕ. ಮರಕ್ಕೆ 11 ಕೆ‌ ವಿ  ವಿದ್ಯುತ್ ತಂತಿ ಸ್ಪರ್ಶಗೊಂಡಿದ್ದನ್ನು ತಿಳಿಯದೆ ಮನೋಜ್ ಮರದ ಬಳಿ ಹೋಗಿದ್ದು, ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾನೆ.

ಈ ಬಗ್ಗೆ ವಿದ್ಯುತ್ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Join Whatsapp
Exit mobile version