ಮಡಿಕೇರಿ ಹೋಂ ಸ್ಟೇ ನಲ್ಲಿ ವಿದ್ಯಾರ್ಥಿನಿ ಸಾವು | ಮೃತದೇಹ ಊರಿಗೆ ತಲುಪಿಸಲು ನೆರವಾದ ಎಸ್ ಡಿಪಿಐ

Prasthutha|

ಮಡಿಕೇರಿ: ಮಡಿಕೇರಿ ಹೋಂ ಸ್ಟೇ ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಮೃತಪಟ್ಟ ವಿದ್ಯಾರ್ಥಿನಿಯ ಪ್ರಾರ್ಥಿವ ಶರೀರವನ್ನು ಆಕೆಯ ಊರಿಗೆ ತಲುಪಿಸಲು ಎಸ್ ಡಿಪಿಐ ನೆರವಾಗಿದೆ. ಇತ್ತೀಚೆಗೆ ಬಳ್ಳಾರಿಯ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಕೊಡಗಿಗೆ ಬಂದ ಸಂದರ್ಭದಲ್ಲಿ ಮಡಿಕೇರಿ ನಗರದ ಹೋಂಸ್ಟೇ ಒಂದರಲ್ಲಿ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಗೀಸರ್ ಲೀಕಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಳು.

- Advertisement -


ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ SDPI ನಿಯೋಗವು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಮಾಹಿತಿ ನೀಡಿ ಪೋಸ್ಟ್ ಮಾರ್ಟಂ ಸೇರಿದಂತೆ ಎಲ್ಲಾ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಚು ಮೃತದೇಹವನ್ನು ಆಕೆಯ ಊರಿಗೆ ತಲುಪಿಸಲು ನೆರವಾಗಿದೆ.


ನಿಯೋಗದಲ್ಲಿ SDPI ಜಿಲ್ಲಾ ಸಮಿತಿ ಸದಸ್ಯ ಮತ್ತು ನಗರಸಭಾ ಸದಸ್ಯರಾದ ಮನ್ಸೂರ್ ಅಲಿ, ಮುಖಂಡರಾದ ಜಲೀಲ್ ಹಾಗೂ ಇನ್ನಿತರ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಎಸ್ ಡಿಪಿಐ ಕಾರ್ಯಕರ್ತರ ಈ ಮಾನವೀಯ ಸೇವೆಗೆ ಸಂತ್ರಸ್ತ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

Join Whatsapp
Exit mobile version