Home ಟಾಪ್ ಸುದ್ದಿಗಳು ಹಾಸನ | ನನ್ನನ್ನು ಕ್ಷಮಿಸಿ ಎಂದು ತಾಯಿಗೆ ಮೆಸೇಜ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ !

ಹಾಸನ | ನನ್ನನ್ನು ಕ್ಷಮಿಸಿ ಎಂದು ತಾಯಿಗೆ ಮೆಸೇಜ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ !

ಹಾಸನ: ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಗೈದ ಬಾಲಕಿಯನ್ನು ಹಾಸನದ ಪೂರ್ವಿಕಾ (15) ಎಂದು ಗುರುತಿಸಲಾಗಿದೆ. ಹಾಸನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿದೆ.


ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ‘ ಎಂದು ತಾಯಿ ಮೊಬೈಲ್ ಗೆ ಮೆಸೇಜ್ ಕಳುಹಿಸಿರುವ ಪೂರ್ವಿಕಾ ಬೆಳಗಿನ ಜಾವ ಮನೆಯಿಂದ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದಿಂದ ಬಾಲಕಿ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version