ಹಾಸನ: ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಾಸನದ ರಾಜೀವ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದಿದೆ.
ಮಾನ್ಯ(19) ಮೃತ ವಿದ್ಯಾರ್ಥಿನಿ.
ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದರಾದ ಮಾನ್ಯ, ಪ್ರಥಮ ವರ್ಷದ ಎಲೆಕ್ಟ್ರಾನಿಕ್& ಕಮ್ಯೂನಿಕೇಷನ್ ಓದುತ್ತಿದ್ದರು. ಮೊದಲ ವರ್ಷದ ಆಂತರಿಕ ಪರೀಕ್ಷೆ ಬರೆಯುತ್ತಿದ್ದ ಮಾನ್ಯ, ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಅಪಾಲಜಿ ಬರೆದುಕೊಡುವಂತೆ ಉಪನ್ಯಾಸಕರು ಮಾನ್ಯಗೆ ಹೇಳಿದ್ದಾರೆ. ಪ್ರಾಂಶುಪಾಲರ ಕೊಠಡಿಗೆ ಬಂದು ಹೋದ ಬಳಿಕ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.