Home ಟಾಪ್ ಸುದ್ದಿಗಳು ಕಾಲೇಜಿಗೆ ಹೋಗುವಾಗ ಕಿರುಕುಳ: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಕಾಲೇಜಿಗೆ ಹೋಗುವಾಗ ಕಿರುಕುಳ: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ: ಪುಂಡ ಯುವಕರ  ಕಿರುಕುಳದಿಂದ ಮನನೊಂದು  ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ರಾಧಿಕಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆ ಗ್ರಾಮದ ಮನೆಯಲ್ಲಿ ರಾಧಿಕಾ ನೇಣಿಗೆ ಕೊರಳೊಡಿದ್ದಾಳೆ.

ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದಾರೆ. ಜಡೆ ಹಿಡಿದು ಎಳೆಯುವುದು, ಅಶ್ಲೀಲವಾಗಿ ಮಾತಾಡಿ ಕಿರುಕುಳ ಕೊಡುತ್ತಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪೋಷಕರ ಬಳಿ ರಾಧಿಕಾ ಹೇಳಿಕೊಂಡಿದ್ದಳು. ಮೃತ ಬಾಲಕಿಯ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.

Join Whatsapp
Exit mobile version