Home ಟಾಪ್ ಸುದ್ದಿಗಳು ಹಾಲ್ ಟಿಕೆಟ್ ನೀಡಲು ಸತಾಯಿಸಿದ ಕಾಲೇಜು: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಹಾಲ್ ಟಿಕೆಟ್ ನೀಡಲು ಸತಾಯಿಸಿದ ಕಾಲೇಜು: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಮೈಸೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಹಾಲ್ ಟಿಕೆಟ್ ನೀಡದೇ ತಾರತಮ್ಯ ಮಾಡುತ್ತಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಯಲಕ್ಷ್ಮೀಪುರಂನಲ್ಲಿ ನಡೆದಿದೆ.

ಸೆಂಟ್ ಜೋಸೆಫ್ ಕಾಲೇಜಿನ ತನ್ಮಯಾ ಬ್ಲೇಡ್ನಿಂದ ಕೈ ಕೊಯ್ದುಕೊಂಡು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಲೇಜಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ತರಗತಿಗಳಿಗೆ ಹಾಜರಿಯಾಗುತ್ತಿದ್ದರೂ ಹಾಜರಾತಿ ನೀಡುತ್ತಿಲ್ಲ. ಹಾಲ್ ಟಿಕೆಟ್ ಹಣ ಕೊಡುವಂತೆ ಪೀಡಿಸುತ್ತಾರೆ. ಕೊಟ್ಟ ಹಣಕ್ಕೆ ಯಾವುದೇ ರಶೀದಿ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಸಾವಿಗೆ ಕಾರಣ ತಿಳಿಸಿದ್ದಾಳೆ.

ವಿಡಿಯೋದಲ್ಲಿ ಏನಿದೆ?:

ಕಾಲೇಜಿನ ಪ್ರಾಂಶುಪಾಲರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಭವಿಷ್ಯ ಹಾಳಾಗುತ್ತೆ ಅಂದ್ರೂ ಡಿಟೇನ್ ಮಾಡಿದ್ದಾರೆ. ದಿನಾಲು ತರಗತಿಗಳಿಗೆ ಹಾಜರಾಗುತ್ತಿದ್ದರೂ, ಹಾಜರಾತಿ ನೀಡುತ್ತಿಲ್ಲ. ಹಾಲ್ ಟಿಕೆಟ್ ಕೊಡುವುದಕ್ಕೆ ದುಡ್ಡು ಕೇಳ್ತಿದ್ದಾರೆ. ದುಡ್ಡು ಕೊಟ್ಟರೆ ಯಾವುದೇ ರಶೀದಿ ಕೊಡುತ್ತಿಲ್ಲ. ಡಿಟೇನ್ ಮಾಡಿದರೆ ಒಂದು ವರ್ಷ ಹಾಳಾಗುತ್ತದೆ ಅಂದ್ರೂ ನನ್ನ ಕಷ್ಟ ಪ್ರಾಂಶುಪಾಲರು ಅರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವಾರದಿಂದ ಪ್ರಾಂಶುಪಾಲರ ಬಳಿ ಅಂಗಾಲಾಚಿ ಬೇಡಿಕೊಂಡರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು ತುಂಬಾ ನೊಂದಿದ್ದೇನೆ ನನ್ನ ಜೀವನವನ್ನು ಎಂಡ್ ಮಾಡಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಾರಣ ಎಂದು ವಿದ್ಯಾರ್ಥಿನಿ ತನ್ಮಯಾ ವಿಡಿಯೋ ಜತೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಪ್ರಕರಣ ದಾಖಲು ಮಾಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version