ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ| ಶಾಂತಿ ಭಂಗವಾದರೆ ತಕ್ಕ ಪಾಠ: ಎಡಿಜಿಪಿ ಅಲೋಕ್ ಕುಮಾರ್

Prasthutha|

ಬೆಳಗಾವಿ: ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಭೇಟಿ ನೀಡುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್‌ಕುಮಾರ್‌, ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬೆಳಗಾವಿಗೆ ಯಾರು ಬಂದರೂ ತಕರಾರು ಇಲ್ಲ. ಏನಾದರೂ ತರಲೆ- ತಂಟೆ ಮಾಡಿದರೆ, ಶಾಂತಿ ಭಂಗ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯಾರು ಬೇಕಾದರೂ ತಮ್ಮವರ ಮನೆಗೆ, ಮದುವೆಗೆ, ಊಟಕ್ಕೆ ಬಂದರೆ ನಾವು ಏನೂ ಮಾಡಲಾಗುವುದಿಲ್ಲ. ಶಾಂತಿ ಕದಡಿದರೆ ಎಂಇಎಸ್‌ ಪುಂಡರಾದರೂ ಸರಿ, ಯಾರಾದರೂ ಸರಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

- Advertisement -

ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್‌ ದೇಸಾಯಿ ಅವರು, ಡಿಸೆಂಬರ್‌ 3ರಂದು ಬೆಳಗಾವಿಯಲ್ಲಿ ಗಡಿ ವಿವಾದದ ವಿಚಾರವಾಗಿ ಸಭೆ ನಡೆಸಲಿದ್ದಾರೆ.

- Advertisement -