ಹೊಸದಿಲ್ಲಿ: ಬೀದಿ ನಾಯಿಗಳಿಗೂ ಮನುಷ್ಯರಂತೆ ಆಹಾರದ ಹಕ್ಕು ಇದೆ. ಪ್ರಾಣಿಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಜೆ.ಆರ್. ಮಿಥ ಅವರ ಏಕ ಪೀಠವು ಬೀದಿ ನಾಯಿಗಳಿಗೆ ಆಹಾರಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಲಸಿಕೆ ಹಾಕಿದ ನಾಯಿಗಳನ್ನು ವಶಪಡಿಸಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಯಾವುದೇ ಹಕ್ಕಿಲ್ಲ. ಬಿದಿ ನಾಯಿಗಳಿಗೆ ಎಲ್ಲೆಡೆ ಆಹಾರವನ್ನು ನೀಡಬಾರದು. ಇದಕ್ಕಾಗಿ ವಿಶೇಷ ಸ್ಥಳಗಳನ್ನು ಹುಡುಕಬೇಕು. ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಹಾರವನ್ನು ಒದಗಿಸಲು ವಿಶೇಷ ಸ್ಥಳಗಳನ್ನು ಹುಡುಕುವಂತೆ ನ್ಯಾಯಾಲಯವು ರಾಷ್ಟ್ರೀಯ ಪ್ರಾಣಿ ಕಲ್ಯಾಣ ಮಂಡಳಿಗೆ ನಿರ್ದೇಶನ ನೀಡಿದೆ.