ಕೀವ್: ಈ ವಾರದ ಮೊದಲ ಸುತ್ತಿನ ಮಾತುಕತೆಗಳಲ್ಲಿ ಅಲ್ಪ ಪ್ರಗತಿಯನ್ನು ಕಂಡನಂತರ, ಕದನ ವಿರಾಮದ ಕುರಿತು ಮಾತುಕತೆಗಳು ಪ್ರಾರಂಭವಾಗುವ ಮೊದಲೇ ಉಕ್ರೇನ್ ನಗರಗಳ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಯನ್ನು ರಷ್ಯಾ ನಿಲ್ಲಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಹೇಳಿದ್ದಾರೆ.
ಭಾರೀ ಭದ್ರತೆಯಿರುವ ಸರ್ಕಾರಿ ಸಂಯುಕ್ತಾಶ್ರಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಝೆಲೆನ್ಸ್ಕಿ, ಜನರ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸುವುದು ಅವಶ್ಯಕ, ಬಾಂಬ್ ಸ್ಫೋಟವನ್ನು ನಿಲ್ಲಿಸಿ ನಂತರ ಸಂಧಾನದ ಮೇಜಿನ ಬಳಿ ಕುಳಿತುಕೊಳ್ಳಿ” ಎಂದು ರಷ್ಯಾಕ್ಕೆ ತಾಕೀತು ಮಾಡಿದರು. ರಷ್ಯಾದ ವಾಯುಪಡೆಯನ್ನು ತಡೆಯಲು ಫ್ಲೈ ಝೋನ್ ಅನ್ನು ವಿಧಿಸಲು ನ್ಯಾಟೋ ಸದಸ್ಯರನ್ನು ಒತ್ತಾಯಿಸಿದರು.
ಅವರು ಮಾತನಾಡುತ್ತಿರುವಂತೆಯೇ, ರಷ್ಯಾದ ಕ್ಷಿಪಣಿಯು ಉಕ್ರೇನ್ ರಾಜಧಾನಿಯಲ್ಲಿ ಹತ್ಯಾಕಾಂಡದ ಸ್ಮಾರಕ ಸ್ಥಳದ ಬಳಿ ಟಿವಿ ಟವರ್ ಗೆ ಬಡಿದು ಕನಿಷ್ಠ ಐದು ಮಂದಿ ಸಾವನ್ನಪ್ಪಿದ ಸುದ್ದಿ ಕೇಳಿಬಂತು.