Home ಟಾಪ್ ಸುದ್ದಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಪ್ರಚಾರ ನಿಲ್ಲಿಸಿ, ಗೆಲುವಿನತ್ತ ಗಮನಹರಿಸಿ: ಕೆ.ಹೆಚ್. ಮುನಿಯಪ್ಪ ಸಲಹೆ

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಪ್ರಚಾರ ನಿಲ್ಲಿಸಿ, ಗೆಲುವಿನತ್ತ ಗಮನಹರಿಸಿ: ಕೆ.ಹೆಚ್. ಮುನಿಯಪ್ಪ ಸಲಹೆ

ಕೋಲಾರ: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಪ್ರಚಾರ ನಿಲ್ಲಿಸಿ  ಪಕ್ಷದ ಗೆಲುವಿನತ್ತ ಗಮನಹರಿಸಬೇಕೆಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೂ 10 ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಪ್ರಚಾರ ನಿಲ್ಲಿಸಿ ಪಕ್ಷದ ಗೆಲುವಿನತ್ತ ಗಮನಹರಿಸಬೇಕಿದೆ. ಪಕ್ಷದ ಗಮನ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯತ್ತ ಇರಬೇಕು ಎಂದು ತಿಳಿಸಿದರು..

ಲೋಕಸಭಾ ಚುನಾವಣೆಯ ಸೋಲಿನ ಕುರಿತು ರಾಜ್ಯ ಕಾಂಗ್ರೆಸ್ ನಾಯಕರಾಗಲಿ ಪಕ್ಷದ ಹೈಕಮಾಂಡ್ ಆಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಗಮನ ಹರಿಸದಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕರನ್ನು ನಾನು ಸ್ವಾಗತಿಸುತ್ತೇನೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬಲಗೊಳ್ಳಬೇಕೆಂಬುದಷ್ಟೇ ನನ್ನ ಏಕೈಕ ಕಾಳಜಿಯಾಗಿದೆ ಎಂದಿದ್ದಾರೆ.

Join Whatsapp
Exit mobile version