ಮಂಗಳೂರು: ಸಂವಿಧಾನಬಧ್ದ ಹಕ್ಕಾದ ಪ್ರತಿಭಟನೆಯನ್ನು ನಡೆಸಿದ ಜನಸಮುದಾಯದ ಮೇಲೆ ಸರಕಾರಿ ಪ್ರಾಯೋಜಿತವಾಗಿ ನಡೆಸುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಮಂಗಳೂರು ವಿಶ್ವವಿದ್ಯಾನಿಲಯದ ಮುಂಭಾಗ ವಿದ್ಯಾರ್ಥಿಗಳಿಂದ ಭಿತ್ತಿಪತ್ರ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ವಿವಿ ಮುಖಂಡರಾದ ಮುಕ್ತಾರ್, ರಿಯಾಝ್, ಅಶಾಮ್ ಮತ್ತಿತರರು ಭಾಗವಹಿಸಿದ್ದರು.