Home ಟಾಪ್ ಸುದ್ದಿಗಳು ಸಂಸದ ಉವೈಸಿ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಸಂಸದ ಉವೈಸಿ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಗಾಂಧೀನಗರ: ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪಕ್ಷದ ವಕ್ತಾರರು ಆರೋಪಿಸಿದ್ದಾರೆ.


ಈ ಸಂಬಂಧ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಟ್ವೀಟ್ ಮಾಡಿದ್ದು, ರೈಲಿನ ಕಂಪಾರ್ಟ್ ಮೆಂಟ್ ನ ಕಿಟಿಕಿಯ ಗಾಜು ಒಡೆದು ಹೋಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಉವೈಸಿ ಪ್ರಯಾಣಿಸುತ್ತಿದ್ದ ಕಂಪಾರ್ಟ್ ಮೆಂಟ್ ಮೇಲೆ ವ್ಯಕ್ತಿ ಕಲ್ಲು ತೂರಾಟ ನಡೆಸಿದ್ದಾನೆ ಎಂದು ಬರೆದುಕೊಂಡಿದ್ದಾರೆ.


ಅಸದುದ್ದೀನ್ ಉವೈಸಿ, ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲಾ ಮತ್ತು ಪಕ್ಷದ ಇತರ ನಾಯಕರು ಅಹಮದಾಬಾದ್ ನಿಂದ ಸೂರತ್ ಗೆ ‘ವಂದೇ ಭಾರತ್ ಎಕ್ಸ್ ಪ್ರೆಸ್’ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

Join Whatsapp
Exit mobile version