Home ಟಾಪ್ ಸುದ್ದಿಗಳು ಕಲ್ಲು ಕ್ವಾರಿ ಕುಸಿತ; 8 ಮಂದಿ ದಾರುಣ ಸಾವು

ಕಲ್ಲು ಕ್ವಾರಿ ಕುಸಿತ; 8 ಮಂದಿ ದಾರುಣ ಸಾವು

ಐಝ್ವಾಲ್: ಕಲ್ಲುಕ್ವಾರಿ ಕುಸಿದು 8 ಮಂದಿ ಮೃತಪಟ್ಟ ಘಟನೆ ಮಿಜೋರಾಂನ ಹನ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.

ಕಲ್ಲುಕ್ವಾರಿಯ ಅಡಿಯಲ್ಲಿ ಸಿಲುಕಿದ್ದ 12 ಮಂದಿಯಲ್ಲಿ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಮೃತರನ್ನು ಬಿಹಾರ ಮೂಲದವರೆಂದು ಗುರುತಿಸಲಾಗಿದೆ.

ನಾಪತ್ತೆಯಾಗಿರುವ ಎಲ್ಲ ಕಾರ್ಮಿಕರು ಪತ್ತೆಯಾಗುವವರೆಗೂ ಕಾರ್ಯಾಚರಣೆ ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

ಕಾರ್ಮಿಕರ ಜೊತೆಗೆ ಐದು ಹಿಟಾಚಿ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಲೀಟೆ ಮತ್ತು ನಾತಿಯಾಲ್ ಗ್ರಾಮಗಳ ಜನರು ಸ್ವಯಂಪ್ರೇರಿತರಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

Join Whatsapp
Exit mobile version