ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ

Prasthutha|

ಔರಂಗಾಬಾದ್: ಶಿವಸೇನಾ (ಯುಬಿಟಿ) ನಾಯಕ, ಶಾಸಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದ ಘಟನೆ ವೈಜಾಪುರದ ಮಹಲ್ ಗಾಂವ್ ನಲ್ಲಿ ನಡೆದಿದೆ.

- Advertisement -


ಈ ಬಗ್ಗೆ ಶಿವಸೇನೆ ನಾಯಕ ಅಂಬಾದಾಸ್ ದಾನ್ವೆ ಹೇಳಿಕೆ ನೀಡಿದ್ದು, ವೈಜಾಪುರದ ಮಹಲ್ಗಾಂವ್ ನಲ್ಲಿ ಆದಿತ್ಯ ಠಾಕ್ರೆ ಅವರು ಶಿವಸಂವಾದ ಯಾತ್ರೆ ನಡೆಸುತ್ತಿದ್ದರು. ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಮೆರವಣಿಗೆ ಕೂಡಾ ಇದೇ ಸಂದರ್ಭದಲ್ಲಿ ನಡೆದಿದ್ದು, ಈ ವೇಳೆ ಆದಿತ್ಯ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿಸಿದ್ದಾರೆ.


ಶಿವಸೇನೆ ಬೆಂಗಾವಲು ಪಡೆ ಹಾಗೂ ಮೆರವಣಿಗೆನಿರತರ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದರು.