Home ಗಲ್ಫ್ ಸೌದಿ ಅರೇಬಿಯಾದಲ್ಲಿ ಎರಡು ಲಕ್ಷ ವರ್ಷ ಹಿಂದಿನ ಶಿಲಾ ಆಯುಧಗಳು ಪತ್ತೆ

ಸೌದಿ ಅರೇಬಿಯಾದಲ್ಲಿ ಎರಡು ಲಕ್ಷ ವರ್ಷ ಹಿಂದಿನ ಶಿಲಾ ಆಯುಧಗಳು ಪತ್ತೆ

ರಿಯಾದ್: 200000 ವರ್ಷಗಳ ಹಿಂದೆ ಪೂರ್ವ ಶಿಲಾಯುಗ ಅವಧಿಯಲ್ಲಿ  ಅಸ್ಸೀರಿಯಾ ನಾಗರಿಕತೆಯ ನಿವಾಸಿಗಳು ಬಳಸುತ್ತಿದ್ದ ಶಿಲಾ ಆಯುಧಗಳನ್ನು ಪುರಾತತ್ವ ಪ್ರಾಧಿಕಾರದ ಸೌದಿ ಅರೇಬಿಯಾ ವಿಜ್ನಾನಿಗಳ ತಂಡ ಪತ್ತೆಹಚ್ಚಿದೆ.

ಅಲ್ ಘಸಿಂ ಪ್ರದೇಶದ ಪೂರ್ವದಲ್ಲಿ ಶುಐಬ್ ಅಲ್ ಅಘಾಮ್ ನಲ್ಲಿ ಪತ್ತೆಯಾದ ಶಿಲಾ ಆಯುಧಗಳು ಮಧ್ಯ ಪೂರ್ವ ಶಿಲಾಯುಗದ ಅವಧಿಯ ಶಿಲಾ ಕೊಡಲಿಗಳಾಗಿವೆ ಎಂದು ಪುರಾತತ್ವ ಪ್ರಾಧಿಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇವುಗಳು ಅನುಪಮವಾದ ಮತ್ತು ಅಪರೂಪದ ಶಿಲಾ ಕೊಡಲಿಗಳಾಗಿದ್ದು, ಅವುಗಳ ಉತ್ಪಾದನೆ ಉತ್ತಮ ನಿಖರತೆಯೊಂದಿಗೆ ವಿಶಿಷ್ಟವಾಗಿದೆ. ತಮ್ಮ ನಿತ್ಯ ಬದುಕಿನಲ್ಲಿ ಈ ಮಾನವ ಗುಂಪುಗಳು ಅದನ್ನು ಬಳಸುತ್ತಿದ್ದವು. ಇತಿಹಾಸ ಪೂರ್ವದ ಸಮುದಾಯಗಳ ಅತ್ಯುತ್ತಮ ಸಾಂದ್ರತೆಯೊಂದು ಈ ಪ್ರದೇಶದಲ್ಲಿ ಬದುಕುತ್ತಿತ್ತು ಎಂಬುದು ಈ ಪ್ರದೇಶದಲ್ಲಿ ದೊರಕಿದ ಶಿಲಾ ಆಯುಧಗಳ ಸಮೃದ್ಧಿಯಿಂದ ತಿಳಿಯಬಹುದಾಗಿದೆ.

ಅರೇಬಿಯನ್ ಪರ್ಯಾಯ ದ್ವೀಪದ ವಾತಾವರಣದ ಪರಿಸ್ಥಿತಿ ಈ ಸಂದರ್ಭದಲ್ಲಿ ಮಾನವ ಗುಂಪುಗಳಿಗೆ ಬದುಕಲು ಯೋಗ್ಯವಾಗಿತ್ತು ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅವರು ಅಲ್ಲಿದ್ದ ಪಾಕೃತಿಕ ಸಂಪನ್ಮೂಲಗಳ ಫಲವನ್ನು ಅನುಭವಿಸುತ್ತಿದ್ದರು.


Join Whatsapp
Exit mobile version