Home ಟಾಪ್ ಸುದ್ದಿಗಳು ಹಣದ ಬದಲು ಅಕ್ಕಿ ವಿತರಿಸಲು ಕ್ರಮ ವಹಿಸಲಾಗುತ್ತದೆ: ಮುನಿಯಪ್ಪ

ಹಣದ ಬದಲು ಅಕ್ಕಿ ವಿತರಿಸಲು ಕ್ರಮ ವಹಿಸಲಾಗುತ್ತದೆ: ಮುನಿಯಪ್ಪ

ಬೆಳಗಾವಿ: ಆಹಾರ ಭದ್ರತೆಯಡಿ ಪಡಿತರದಾರರಿಗೆ ಕೇಂದ್ರದ 5 ಕೆ ಜಿ ಆಹಾರ ಧಾನ್ಯ ವಿತರಣೆ ಜೊತೆ ರಾಜ್ಯದಿಂದ ಪೂರೈಸಬೇಕಿದ್ದ 5 ಕೆ ಜಿ ಅಕ್ಕಿ ಬದಲು ನೀಡಲಾಗುತ್ತಿರುವ ಹಣವನ್ನು ಹೆಚ್ಚು ಮಾಡುವುದಿಲ್ಲ. ಕೇಂದ್ರ ಆಹಾರ ನಿಗಮ ನಿಗದಿಪಡಿಸಿದ ಹಣವನ್ನೇ ನಾವು ಫಲಾನುಭವಿಗಳ ಖಾತೆಗೆ ನೀಡುತ್ತಿದ್ದೇವೆ. ಆದಷ್ಟು ಬೇಗ ಹಣದ ಬದಲು ಅಕ್ಕಿಯನ್ನೇ ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಬದಲು ತಳವಾರ ಸಾಬಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರದಿಂದ ಪಡಿತರದಾರರಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿ, ರಾಜ್ಯದಿಂದ ನೀಡಬೇಕಿದ್ದ 5 ಕೆಜಿ ಅಕ್ಕಿ ಬದಲು ತಲಾ ಕೆಜಿಗೆ 34 ರೂ. ನೀಡಲಾಗುತ್ತಿದೆ. ಆಹಾರ ನಿಗಮ ನಿಗದಿಪಡಿಸಿದ ಹಣವನ್ನೇ ನಾವು ಕೊಡುತ್ತಿದ್ದೇವೆ. ಅದನ್ನು ಮಾರುಕಟ್ಟೆ ದರದಲ್ಲಿ ಅಕ್ಕಿ ದರ ಹೆಚ್ಚಿದೆ ಎನ್ನುವ ಕಾರಣಕ್ಕೆ ನಾವು ಹೆಚ್ಚು ಮಾಡಲು ಸಾಧ್ಯವಿಲ್ಲ. ಆದರೂ ನಾವು ಹಣದ ಬದಲು ಅಕ್ಕಿಯನ್ನೇ ನೀಡಲು ಚಿಂತನೆ ಮಾಡಿದ್ದೇವೆ. ಕೇಂದ್ರದ ಜೊತೆ ಮಾತುಕತೆ ನಡೆಸುತ್ತಿದ್ದು, ಅಕ್ಕಿ ದರ ಕಡಿತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

Join Whatsapp
Exit mobile version