Home ಟಾಪ್ ಸುದ್ದಿಗಳು ಕಾಫಿರ್, ಉಮ್ಮತ್, ಜಿಹಾದ್ ಕಲ್ಪನೆಗಳಿಂದ ದೂರವಿರಿ: ಆರೆಸ್ಸೆಸ್ ನಾಯಕ ರಾಮ್ ಮಾಧವ್

ಕಾಫಿರ್, ಉಮ್ಮತ್, ಜಿಹಾದ್ ಕಲ್ಪನೆಗಳಿಂದ ದೂರವಿರಿ: ಆರೆಸ್ಸೆಸ್ ನಾಯಕ ರಾಮ್ ಮಾಧವ್

ಹೊಸದಿಲ್ಲಿ: ಕಾಫಿರ್ ಉಮ್ಮತ್ ಮತ್ತು ಜಿಹಾದ್ ಎಂಬ ಮೂರು ಸಿದ್ಧಾಂತಗಳು ಮುಸ್ಲಿಮರನ್ನು ಅಂಗೀಕರಿಸಲು  ಅಡ್ಡಿಯಾಗುತ್ತವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಹಿರಿಯ ನಾಯಕ ರಾಮ್ ಮಾಧವ್ ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ತಮ್ಮ ಬೇರುಗಳು ಇಸ್ಲಾಮಿಕ್ ದೇಶದ ಆಕ್ರಮಣಕಾರರಲ್ಲಿದೆ ಎಂದು ಒಪ್ಪಿಕೊಂಡರೆ ಮತ್ತು ಇಸ್ಲಾಮಿನ ಮಧ್ಯಕಾಲೀನ ಇತಿಹಾಸವನ್ನು ತ್ಯಜಿಸಿದರೆ, ಹಿಂದೂಗಳು ಸಹ ನೂರಾರು ವರ್ಷಗಳ ಹಿಂದೆ ನಡೆದ ವಿನಾಶದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಧವ್ ಪೂರ್ವಗ್ರಹ ಹೇಳಿಕೆಗಳನ್ನು ನೀಡಿದರು.

ಕಾಶ್ಮೀರಿ ಪಂಡಿತರಿಗೆ ಬೆಂಬಲ ಸೂಚಿಸಿದ ರಾಮ್ ಮಾಧವ್, ಪ್ರಧಾನ ಮಂತ್ರಿಯವರ ಉದ್ಯೋಗ ಪ್ಯಾಕೇಜ್ ಪಂಡಿತರಿಗೆ ಉದ್ಯೋಗವನ್ನು ನೀಡಿದೆ. ಆದರೆ ಅವರಿಗೆ ಭದ್ರತೆ ಎಲ್ಲಿದೆ  ಎಂದು ಪ್ರಶ್ನಿಸಿದರು.

ಕಾಶ್ಮೀರಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಮಧ್ಯಪ್ರವೇಶಿಸಬೇಕು. ಕೊಲೆಗಳು ನಡೆದಾಗ, ಅವರನ್ನು ತಲುಪಲು ಯಾವುದೇ ರಾಜಕೀಯ ನಾಯಕತ್ವವಿಲ್ಲ. ಅವರು ಅಲ್ಲಿ ಸುಮ್ಮನೆ ಕುಳಿತಿದ್ದಾರೆ. ನಾವು ಅವರನ್ನು ಮತ್ತೆ ಕಾರ್ಯರೂಪಕ್ಕೆ ತರಬೇಕಾಗಿದೆ” ಎಂದು ಹೇಳಿದರು.

Join Whatsapp
Exit mobile version