ಬೆಂಗಳೂರು: ರಾಜ್ಯಾದ್ಯಂತ ನಾಳೆ(ಸೆ.03) ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಎರಡು ಅರ್ಹತಾ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ಮುಂದಾಗಿದೆ. ಅದರಂತೆ ರಾಜ್ಯದ 35 ಶೈಕ್ಷಣಿಕ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ ಏರ್ಪಡಿಸಲಾಗಿದೆ.
ಇನ್ನು ಅಧಿಕೃತ ಅಧಿಸೂಚನೆಯ ಪ್ರಕಾರ, ಪರೀಕ್ಷೆಯ ಮೊದಲ ಪತ್ರಿಕೆಯು ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:00 ರವರೆಗೆ ನಡೆಯಲಿದ್ದು, ಎರಡನೇ ಪತ್ರಿಕೆಯು ಮಧ್ಯಾಹ್ನ 02:00 ರಿಂದ ಸಂಜೆ 04:30 ರವರೆಗೆ ನಡೆಯಲಿದೆ. ಪರೀಕ್ಷೆಯ ಅವಧಿಯು 2.30 ನಿಮಿಷಗಳು ನಿಗದಿಪಡಿಸಲಾಗಿದೆ.
ಇನ್ನು ರಾಜ್ಯದಾದ್ಯಂತ ವಿವಿಧ ಶಾಲಾ ಹಂತಗಳಲ್ಲಿ ಬೋಧಕ ಹುದ್ದೆಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಈ ಪರೀಕ್ಷೆಯನ್ನು ನಡೆಸುತ್ತಿದೆ. ಪತ್ರಿಕೆ -1, 1 ರಿಂದ 5 ನೇ ತರಗತಿ ಭೋದಿಸುವ ಶಿಕ್ಷಕರಿಗಾಗಿ ನಡೆಸಲಾಗುತ್ತಿದ್ದು, 1,43,705 ಅರ್ಜಿ ಸಲ್ಲಿಕೆಯಾಗಿದೆ. 544 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪತ್ರಿಕೆ -2, ಇದನ್ನು 6 ರಿಂದ 8 ನೇ ತರಗತಿ ಭೋದಿಸುವ ಶಿಕ್ಷಕರಿಗಾಗಿ ನಡೆಸಲಾಗಿದ್ದು, 1,89,994 ಅರ್ಜಿ ಸಲ್ಲಿಕೆಯಾಗಿದೆ. ಮತ್ತು 711 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಗಳನ್ನು ಏರ್ಪಡಿಸಲಾಗಿದೆ.
ರಾಜ್ಯದಲ್ಲಿ ಖಾಲಿಯಿರುವ ಶಿಕ್ಷಕರನ್ನು ತುಂಬಿಕೊಳ್ಳುವ ಸಲುವಾಗಿ DSE ಕರ್ನಾಟಕವು (ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ) ಜುಲೈ 14 ರಂದು KARTET 2023 ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಬಳಿಕ ಪರೀಕ್ಷೆಯನ್ನು ಸೆಪ್ಟಂಬರ್ 3 ರಂದು ನಡೆಸಲಾಗುವುದು ಎಂದು ತನ್ನ ವೆಬ್ಸೈಟ್ನಲ್ಲಿ ತಿಳಿಸಿತ್ತು. ಇದೀಗ ನಾಳೆ ಪರೀಕ್ಷೆ ನಡೆಯುತ್ತಿದೆ.