Home ಟಾಪ್ ಸುದ್ದಿಗಳು CAA ಅನುಷ್ಠಾನವನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ: ಅಮಿತ್ ಶಾ

CAA ಅನುಷ್ಠಾನವನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ: ಅಮಿತ್ ಶಾ

ನವದೆಹಲಿ: CAA ( ಪೌರತ್ವ ತಿದ್ದುಪಡಿ ಕಾಯ್ದೆ) ಅನುಷ್ಠಾನವನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.


ಸಿಎಎಯನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳು ವಿರೋಧಿಸಿದೆ. ಈ ಬಗ್ಗೆ ಉತ್ತರಿಸಿದ ಶಾ, ಸಿಎಎ ಸಂವಿಧಾನದ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಈ ಕಾನೂನನ್ನು ಮೋದಿ ಸರ್ಕಾರ ತಂದಿದೆ ಮತ್ತು ಅದನ್ನು ರದ್ದುಗೊಳಿಸುವುದು ಅಸಾಧ್ಯ ಎಂದು ಹೇಳಿದರು. ಈ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷದ ನಾಯಕರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಅದರ ಅನುಷ್ಠಾನವನ್ನು ನಿರಾಕರಿಸುವ ಹಕ್ಕು ನಿಮಗೆ ಇದೆಯೇ? ಅವರು ಇದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿ, ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಹಕ್ಕನ್ನು ಸಂಸತ್ತಿಗೆ ಮಾತ್ರ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಅಧಿಕಾರ. ಹಾಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಅದರ ಅನುಷ್ಠಾನ ಎರಡನ್ನೂ ಕೇಂದ್ರ ಮಾಡುತ್ತದೆ. ಲೋಕಸಭೆ ಚುನಾವಣೆ ನಂತರ ಎಲ್ಲ ರಾಜಕೀಯ ಪಕ್ಷಗಳು ಒಂದೆಡೆ ಬಂದು ಸಹಕಾರ ನೀಡಲಿವೆ ಎಂದು ಹೇಳಿದರು.

Join Whatsapp
Exit mobile version