Home ಟಾಪ್ ಸುದ್ದಿಗಳು ಧರ್ಮ ಸಂಸದ್ ನಲ್ಲಿ ನೀಡಿರುವ ಹೇಳಿಕೆಗಳು ಹಿಂದುತ್ವವಲ್ಲ ಎಂದ RSS ಮುಖ್ಯಸ್ಥ

ಧರ್ಮ ಸಂಸದ್ ನಲ್ಲಿ ನೀಡಿರುವ ಹೇಳಿಕೆಗಳು ಹಿಂದುತ್ವವಲ್ಲ ಎಂದ RSS ಮುಖ್ಯಸ್ಥ

ನಾಗ್ಪರ: ಇತ್ತೀಚೆಗೆ ನಡೆದ ‘ಧರ್ಮ ಸಂಸದ್’ಕಾರ್ಯಕ್ರಮವೊಂದರಲ್ಲಿ ನರಮೇಧಕ್ಕೆ ಕರೆ ನೀಡಿದ ಹೇಳಿಕೆಗಳು ಹಿಂದುತ್ವವಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವವರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್  ಭಾನುವಾರ ಹೇಳಿದ್ದಾರೆ.

ಲೋಕಮತ ನಾಗ್ಪುರ ಆವೃತ್ತಿಯ ಸುವರ್ಣ ಮಹೋತ್ಸವದ ಅಂಗವಾಗಿ ಲೋಕಮತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ವಿಷಯದ ಕುರಿತು ಮಾತನಾಡುತ್ತಾ “ಧರ್ಮ ಸಂಸತ್ ನಿಂದ ಹೊರಬಂದ ಹೇಳಿಕೆಗಳು ಹಿಂದೂ ಕೃತಿಗಳಲ್ಲ, ನಾವು ಕೆಲವೊಮ್ಮೆ ಕೋಪದಿಂದ ಏನನ್ನಾದರೂ ಹೇಳಿದರೆ ಅದು ಹಿಂದುತ್ವವಲ್ಲ, ಆರೆಸ್ಸೆಸ್ ಅಥವಾ ಹಿಂದುತ್ವವನ್ನು ಅನುಸರಿಸುವವರು ಇದನ್ನು ಒಪ್ಪುವುದಿಲ್ಲ” ಎಂದು ಅವರು ಹೇಳಿದರು.

ಹಿಂದೂ ಸಮಾಜ ಒಗ್ಗಟ್ಟಾಗಿ ಸಂಘಟಿತವಾದರೆ ಭಗವದ್ಗೀತೆಯ ಬಗ್ಗೆ ಮಾತನಾಡುತ್ತದೆಯೇ ಹೊರತು ಯಾರನ್ನೂ ಮುಗಿಸುವ ಅಥವಾ ಕೆಡಿಸುವ ಬಗ್ಗೆ ಅಲ್ಲ ಎಂದು ವೀರ್ ಸಾವರ್ಕರ್ ಕೂಡ ಹೇಳಿದ್ದರು. ರಾಷ್ಟ್ರೀಯ ಏಕೀಕರಣದ ಪರಿಕಲ್ಪನೆಗೆ ಏಕರೂಪತೆಯ ಅಗತ್ಯವಿಲ್ಲ ಏಕೆಂದರೆ “ವಿಭಿನ್ನವಾಗಿರುವುದು ಪ್ರತ್ಯೇಕವಲ್ಲ” ಎಂದು ಆರ್ ಎಸ್ ಎಸ್  ಮುಖ್ಯಸ್ಥರು ಹೇಳಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ಡಿಸೆಂಬರ್ ನಲ್ಲಿ  ನಡೆದ ‘ಧರ್ಮ ಸಂಸದ್’ ಭಾಷಣದ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ನರಮೇಧ ನಡೆಸುವ  ಪ್ರಚೋದನಕಾರಿ ಹೇಳಿಕೆ ನೀಡಲಾಗಿತ್ತು. ಐಪಿಸಿಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Join Whatsapp
Exit mobile version