Home ಟಾಪ್ ಸುದ್ದಿಗಳು ಮೋದಿ ವಿರುದ್ಧ ಹೇಳಿಕೆ: ಕೇಜ್ರಿವಾಲ್ ಬಳಿಕ ಪ್ರಿಯಾಂಕಾ ಗಾಂಧಿಗೂ ಚುನಾವಣಾ ಆಯೋಗ ನೋಟಿಸ್

ಮೋದಿ ವಿರುದ್ಧ ಹೇಳಿಕೆ: ಕೇಜ್ರಿವಾಲ್ ಬಳಿಕ ಪ್ರಿಯಾಂಕಾ ಗಾಂಧಿಗೂ ಚುನಾವಣಾ ಆಯೋಗ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಾಧಾರ ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಈ ಅಧಿಸೂಚನೆಯು ಚುನಾವಣಾ ನ್ಯಾಯಸಮ್ಮತತೆಯನ್ನು ಕಾಪಾಡುವ ಮತ್ತು ಮಾದರಿ ನೀತಿ ಸಂಹಿತೆಗೆ ಬದ್ಧವಾಗಿರುವ ಚುನಾವಣಾ ಆಯೋಗದ ಬದ್ಧತೆಯ ಭಾಗವಾಗಿದೆ ಎಂದು ಆಯೋಗ ತಿಳಿಸಿದೆ.

ಇದಕ್ಕಿಂತ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಗೌತಮ್ ಅದಾನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದಕ್ಕಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿತ್ತು. ಬಳಿಕ‌ ಅದೇ ರೀತಿಯ ಕಾರಣಕ್ಕೆ ಪ್ರಿಯಾಂಕ ಗಾಂಧಿ ಕೂಡ ಆಯೋಗದಿಂದ ನೋಟಿಸ್ ಪಡೆದಿದ್ದಾರೆ.

Join Whatsapp
Exit mobile version