Home ಟಾಪ್ ಸುದ್ದಿಗಳು ಹಾವೇರಿಯಲ್ಲಿ ರಾಜ್ಯಮಟ್ಟದ ಕಲೋತ್ಸವ: ಕನ್ನಡ ಭಾಷಣದಲ್ಲಿ ಮುಹಮ್ಮದ್ ಸ್ವಾಲಿಹ್ ಪ್ರಥಮ

ಹಾವೇರಿಯಲ್ಲಿ ರಾಜ್ಯಮಟ್ಟದ ಕಲೋತ್ಸವ: ಕನ್ನಡ ಭಾಷಣದಲ್ಲಿ ಮುಹಮ್ಮದ್ ಸ್ವಾಲಿಹ್ ಪ್ರಥಮ

ಮಂಗಳೂರು: ಹಾವೇರಿಯಲ್ಲಿ SKSSF  ವತಿಯಿಂದ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಮುಹಮ್ಮದ್ ಸ್ವಾಲಿಹ್ ಅಡ್ಯಾರ್ ಪದವು ಪ್ರಥಮ ಸ್ಥಾನ ಗಳಿಸಿದ್ದಾರೆ.

ಅಡ್ಯಾರ್ ಪದವು ಅಬ್ದುಲ್ ಖಾದರ್ ಮತ್ತು ಖತೀಜಮ್ಮ ದಂಪತಿಯ ಮಗನಾದ ಮುಹಮ್ಮದ್ ಸ್ವಾಲಿಹ್ , ಪ್ರಸ್ತುತ ಅಡ್ಯಾರ್ ಕಣ್ಣೂರಿನ ಅನ್ವಾರುಲ್ ಹುದಾ ದರ್ಸ್ನ ವಿದ್ಯಾರ್ಥಿ. SKSSF  ಆಯೋಜಿಸಿರುವ ಸರ್ಗಲಯ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಜೂನಿಯರ್ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಉಳ್ಳಾಲದಲ್ಲಿ ನಡೆದ  ದ.ಕ. ವೆಸ್ಟ್ ಜಿಲ್ಲಾ ಮಟ್ಟದ ಸರ್ಗಲಯ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಜೂನಿಯರ್ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

Join Whatsapp
Exit mobile version