Home ಟಾಪ್ ಸುದ್ದಿಗಳು ನಮಾಝ್ ಕೇಸ್; ರಾಜ್ಯ ಸರ್ಕಾರ ಒತ್ತಾಯಪೂರ್ವಕವಾಗಿ ‘ಬಿ’ ರಿಪೋರ್ಟ್ ಸಲ್ಲಿಸಿದೆ: ಸುನಿಲ್ ಕುಮಾರ್

ನಮಾಝ್ ಕೇಸ್; ರಾಜ್ಯ ಸರ್ಕಾರ ಒತ್ತಾಯಪೂರ್ವಕವಾಗಿ ‘ಬಿ’ ರಿಪೋರ್ಟ್ ಸಲ್ಲಿಸಿದೆ: ಸುನಿಲ್ ಕುಮಾರ್

ಬೆಂಗಳೂರು: ಕಂಕನಾಡಿ ಮಸೀದಿ ಮುಂಭಾಗದ ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ ಪ್ರಕರಣಕ್ಕೆ ರಾಜ್ಯ ಸರ್ಕಾರ ಒತ್ತಾಯಪೂರ್ವಕವಾಗಿ ಬಿ ರಿಪೋರ್ಟ್ ಸಲ್ಲಿಸಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದರು.


ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಪರಾಧ ಕೃತ್ಯ ಅಥವಾ ಕಾನೂನು ಬಾಹಿರ ವರ್ತನೆ ನಡೆಸುವುದು ತಪ್ಪಲ್ಲ ! ಆದರೆ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳುವುದು ತಪ್ಪು ಎಂದರು. ಪಂಪ್ ವೆಲ್ ಪ್ರಕರಣದಲ್ಲೂ ಹಾಗೇ ಆಗಿದೆ. ರಸ್ತೆಯಲ್ಲಿ ನಮಾಜ್ ಮಾಡಿ ಸಮಾಜದ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಅನಾನುಕೂಲತೆ ಸೃಷ್ಟಿಸಿದವರನ್ನು ಬಂಧಿಸುವುದು ಬಿಟ್ಟು, ಪ್ರಕರಣವನ್ನು ಬೆಳಕಿಗೆ ತಂದ ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮಾತ್ರವಲ್ಲ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ ಎಂದು ಹೇಳಿದ್ದಾರೆ.


ಒಂದು ಸಮುದಾಯದ ಓಲೈಕೆಗಾಗಿ ಇಡಿ ರಾಜ್ಯದ ಹಿತ ಕಡೆಗಣಿಸಲಾಗುತ್ತಿದೆ ಎಂದರೆ ಅದು ಜಿಹಾದಿ ಸರ್ಕಾರದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈಗ ನಡೆಸುತ್ತಿರುವುದು ಸರ್ಕಾರವಲ್ಲ, ತಾಲೀಬಾನ್ ಗಿರಿ ಎಂದು ಹೇಳಿದ್ದಾರೆ.

Join Whatsapp
Exit mobile version