Home ಟಾಪ್ ಸುದ್ದಿಗಳು ಟಿಪ್ಪು ಜಯಂತಿ ಮರುದಿನ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಆದೇಶ

ಟಿಪ್ಪು ಜಯಂತಿ ಮರುದಿನ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯಾದ್ಯಂತ ಇದೇ ತಿಂಗಳ 11ರಂದು ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆಗೆ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಓಬವ್ವ ಜಯಂತಿ ಆಚರಿಸಲು ಆದೇಶಿಸಿದ್ದು, ಜಯಂತಿ ಆಚರಣೆಗೆ ತಗುಲುವ ವೆಚ್ಚವನ್ನು ಮಹಾಪುರುಷರ ಜಯಂತಿಗಳ ಆಚರಣೆಯ ಲೆಕ್ಕ ಶೀರ್ಷಿಕೆಯಡಿ ಭರಿಸತಕ್ಕದ್ದು. ಓಬವ್ವರ ಹೆಸರು ಚಿತ್ರದುರ್ಗ ಇತಿಹಾಸದಲ್ಲಿ ಮರೆಯಲಾಗದು. ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದರು. ಹೀಗಾಗಿ ನ.11ರಂದು ಓಬವ್ವ ಅವರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವಂತೆ ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ಆದೇಶ ಮಾಡಿದ್ದಾರೆ.

Join Whatsapp
Exit mobile version