Home ಕರಾವಳಿ ಬೆಂಗರೆ | ನದಿ ಮಧ್ಯದಲ್ಲಿ ಡ್ರಿಜ್ಜಿಂಗ್ ಕೆಲಸ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ: ಶಾಸಕ ವೇದವ್ಯಾಸ್ ಕಾಮತ್ ರನ್ನು...

ಬೆಂಗರೆ | ನದಿ ಮಧ್ಯದಲ್ಲಿ ಡ್ರಿಜ್ಜಿಂಗ್ ಕೆಲಸ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ: ಶಾಸಕ ವೇದವ್ಯಾಸ್ ಕಾಮತ್ ರನ್ನು ಭೇಟಿಯಾದ ನಿಯೋಗ

ಮಂಗಳೂರು: ಕಸಬ ಬೆಂಗರೆಯ ಬಿ.ಎಂ.ಡಿ ಫೇರಿ ಬೋಟ್ ಸಂಚರಿಸುವ ನದಿ ಮದ್ಯದಲ್ಲಿ ಡ್ರಿಜ್ಜಿಂಗ್ ಕೆಲಸ  ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ರವರನ್ನು ನಿಯೋಗ ಭೇಟಿಯಾಗಿದೆ.

ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಬಿಲಾಲ್ ಮೊಯ್ದೀನ್ ನೇತೃತ್ವದ ನಿಯೋಗವು ವೇದವ್ಯಾಸ್ ಕಾಮತ್ ರಿಗೆ ಮಾನವಿ ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ಒಳಪಡುವ ಬೆಂಗರೆಯಿಂದ ಬಂದರು ಧಕ್ಕೆಯ ಮಧ್ಯದಲ್ಲಿ ಬಿ.ಎಂ.ಡಿ ಬೋಟ್ ಸಂಚರಿಸುವ ಫಾಲ್ಗುನಿ ನದಿಯಲ್ಲಿ ಹೂಳು ತುಂಬಿ ಕೊಂಡು ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಂಡು ನೀಡಿದ ಮನವಿಗೆ ಈಗಾಗಲೇ  ಸುಮಾರು 98ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಆದರೆ ಕಾಮಗಾರಿ ಚಾಲನೆಗೆ ದಿನವನ್ನು ನಿಗದಿಪಡಿಸಬೇಕೆಂದು‌ ನಿಯೋಗವು ಶಾಸಕರನ್ನು ಮನವಿ ಮಾಡಿದೆ.

ಮನವಿಗೆ ಸ್ಪಂದಿಸಿದ ಶಾಸಕರು ನವೆಂಬರ್ ತಿಂಗಳ 6ನೇ ತಾರೀಖಿನಂದು ದಿನಾಂಕ ವನ್ನು ನಿಗದಿಪಡಿಸಿದ್ದಾರೆ.  ಈ ಸಂಧರ್ಭ ನಿಯೋಗದಲ್ಲಿ ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗರೆ ,ಮಾಜಿ ಮೇಯರ್ ಗಳಾದ ಪ್ರೇಮಾಣಂದ ಶೆಟ್ಟಿ ,‌ದಿವಾಕರ್ ಪಾಂಡೇಶ್ವರ ,ಮೀನುಗಾರಿಕೆ ನಿಗಮದ ಅಧ್ಯಕ್ಷರಾದ ನಿತೀನ್ ಬೋಲಾರ್ ,ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ,ಸಲೀಂ, ಬಿ,ಎಚ್ ಅನ್ವರ್,ರಿಯಾಝ್ ಬೆಂಗರೆ, ಶರೀಫ್ ಪಾಂಡೇಶ್ವರ್,ಇಮ್ರಾನ್ ,ನೌರೀನ್ ಉಪಸ್ಥಿತಿ ಇದ್ದ

Join Whatsapp
Exit mobile version