Home ಟಾಪ್ ಸುದ್ದಿಗಳು ಅಗ್ನಿಪಥ್‌ಗೆ ತಯಾರಿ ವೇಳೆ ‘ಯುದ್ಧಭೂಮಿ’ಯಾದ ಕ್ರೀಡಾಂಗಣ

ಅಗ್ನಿಪಥ್‌ಗೆ ತಯಾರಿ ವೇಳೆ ‘ಯುದ್ಧಭೂಮಿ’ಯಾದ ಕ್ರೀಡಾಂಗಣ

ಭೋಪಾಲ್: ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕರ ಗುಂಪು ಪರಸ್ಪರ ಬಡಿದಾಡಿಕೊಂಡ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕ್ರೀಡಾಂಗಣವೊಂದರಲ್ಲಿ ನಡೆದಿದೆ. ಸಶಸ್ತ್ರ ಪಡೆಗಳ ನೇಮಕಾತಿಗೆ ತಯಾರಿ ವೇಳೆ ಈ ಘಟನೆ ನಡೆದಿದ್ದು, ಪರಸ್ಪರ ಕಲ್ಲು ತೂರಾಟ, ಬಡಿಗೆ ಮೂಲಕ ಹೊಡೆದಾಟ ಮತ್ತು ಗುಂಡು ಸಿಡಿಸುವ ಮೂಲಕ ಕ್ರೀಡಾಂಗಣ ಅಕ್ಷರಶಃ ಯುದ್ಧಭೂಮಿಯಾಗಿತ್ತು.

ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಯುವಕರ ಗುಂಪು ಮತ್ತೊಂದು ಗುಂಪನ್ನು ಬೆನ್ನಟ್ಟಿದೆ. ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದಲ್ಲದೇ, ಉದ್ದವಾದ ಮರದ ಕೋಲುಗಳನ್ನು ಪರಸ್ಪರ ಝಳಪಿಸಿದ್ದಾರೆ. ಅಲ್ಲದೇ ವೀಡಿಯೋದ ಕೊನೆಯಲ್ಲಿ ಈ ಎರಡೂ ಗುಂಪು ಘರ್ಷಣೆಯಲ್ಲಿ ತೊಡಗಿಕೊಂಡಿದ್ದು ಕಂಡುಬಂದಿದೆ. ಅಲ್ಲದೇ ಪರಸ್ಪರ ಗುಂಡಿನ‌ ಚಕಮಕಿಯೂ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಓಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ ಎನ್ನಲಾಗಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಈವರೆಗೆ ನಾಲ್ಕಕ್ಕೂ ಹೆಚ್ಚುಮಂದಿಯನ್ನು ಬಂಧಿಸಲಾಗಿದೆ.

Join Whatsapp
Exit mobile version