ಬೆಳ್ತಂಗಡಿ | ಕಾಡಿನ ನಡುವೆ ಆಟೊ ಚಾಲಕನಿಗೆ ಚೂರಿಯಿಂದ ಇರಿದು ಪರಾರಿಯಾದ ಆರೋಪಿ

Prasthutha|

ಬೆಳ್ತಂಗಡಿ : ಇಲ್ಲಿನ ಉಜಿರೆ ನಿವಾಸಿಯೊಬ್ಬರಿಗೆ ತಾಲೂಕಿನ ನಿಡಿಗಲ್ ಸೀಟು ಎಂಬಲ್ಲಿ ಚೂರಿ ಇರಿದು, ಆರೋಪಿ ಪರಾರಿಯಾದ ಬಗ್ಗೆ ವರದಿಯಾಗಿದೆ.

ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆ ನಿವಾಸಿ ಸದಾನಂದ (58) ಎಂಬ ಆಟೋ ಚಾಲಕನ ಮೇಲೆ ಈ ದಾಳಿ ನಡೆದಿದೆ. ಆಟೊ ರಿಕ್ಷಾ ಬಾಡಿಗೆಗೆ ಪಡೆದು, ಆಟೊ ಕಾಡಿನ ಹಾದಿಯಲ್ಲಿ ಸಾಗುತ್ತಿದ್ದಂತೆ, ಆರೋಪಿ ಸದಾನಂದ ಅವರಿಗೆ ಇರಿದು ಪರಾರಿಯಾಗಿದ್ದಾನೆ.

- Advertisement -

ಆರೋಪಿಯನ್ನು ಗುರಿಪಳ್ಳ ನಿವಾಸಿ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಕುತ್ತಿಗೆ ಭಾಗಕ್ಕೆ ಗಾಯಗೊಂಡಿರುವ ಸದಾನಂದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ತನಿಖೆ ಕೈಗೊಂಡಿದ್ದಾರೆ.

- Advertisement -