ಮಂಗಳೂರು: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಮ್ಟೂರು, ಕರಿಂಗಾನದ ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಫಾತಿಮಾ ರಿಲಾ 625 ರಲ್ಲಿ 596 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿ ದಾಖಲಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಇವರು ಅಬ್ದುಲ್ ರಝಾಕ್ ಅಲಡ್ಕ ಹಾಗೂ ಎಚ್ ಎಂ ಫೌಝಿಯಾ ಹಂಡೆಲ್ ದಂಪತಿಯ ಪುತ್ರಿಯಾಗಿದ್ದಾರೆ.