Home ಕರಾವಳಿ SSLC ಫಲಿತಾಂಶ: ದ.ಕ. ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625 ಅಂಕ

SSLC ಫಲಿತಾಂಶ: ದ.ಕ. ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625 ಅಂಕ

►ತಾಲೂಕುವಾರು ಫಲಿತಾಂಶದಲ್ಲಿ ಮೂಡಬಿದ್ರೆಗೆ ಮೊದಲ ಸ್ಥಾನ

ಮಂಗಳೂರು: 2021- 2022 ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ. ಜಿಲ್ಲೆಯ 17 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಶನ್, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಎಚ್.ಎಸ್., ಬಂಟ್ವಾಳ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ ನ ಸುಜಯ್ ಬಿ., ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಹೈಸ್ಕೂಲ್ ನ ಇಂದಿರಾ ಅರುಣ್ ನ್ಯಾಮಗೌಡರ್, ಈರಯ್ಯ ಶ್ರೀಶೈಲ, ಕಲ್ಮೇಶ್ವರ್ ಪುಂಡಲೀಕ ನಾಯ್ಕ, ಶ್ರೇಯ ಆರ್. ಶೆಟ್ಟಿ, ಸುದೇಶ್ ದತ್ತಾತ್ರೇಯ ಕಿಲ್ಲೆದಾರ್, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಅಭಯ್ ಶರ್ಮಾ ಕೆ., ಅಭುನಾ ಆರ್, ಆತ್ಮೀಯ ಎಂ. ಕಶ್ಯಪ್, ಬಂಟ್ವಾಳದ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ಧನ್ಯಶ್ರೀ, ಬೆಳ್ತಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಮಧುಶ್ರೀ, ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಶ್ರೀಜಾ ಹೆಬ್ಬಾರ್, ಸ್ವಸ್ತಿ, ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವೀಕ್ಷಾ ವಿ. ಶೆಟ್ಟಿ ಹಾಗೂ ವಿ. ಅಕ್ಷತಾ ಕಾಮತ್ 625 ಅಂಕಗಳನ್ನು ಗಳಿಸಿದ್ದಾರೆ.


ಇನ್ನೂ ತಾಲೂಕುವಾರು ಫಲಿತಾಂಶದಲ್ಲಿ ಮೂಡಬಿದ್ರೆ 82%, ಬೆಳ್ತಂಗಡಿ 80.52%, ಸುಳ್ಯ 77.62%, ಪುತ್ತೂರು 79.86%, ಬಂಟ್ವಾಳ 75.27%, ಮಂಗಳೂರು ಉತ್ತರ 80.60%, ಮಂಗಳೂರು ದಕ್ಷಿಣ 74.59% ಗುಣಾತ್ಮಕ ಫಲಿತಾಂಶ ಬಂದಿದೆ.

Join Whatsapp
Exit mobile version