ಆದರ್ಶ್ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

Prasthutha|

ಮಂಗಳೂರು: ಆದರ್ಶ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಿಜಾರು ಇಲ್ಲಿಯ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಹಂತದಲ್ಲೂ ಸತತವಾಗಿ ಎಸ್. ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ಯಶಸ್ವಿಯಾಗಿ ಪಡೆಯುವಲ್ಲಿ ಸಾಧನೆಗೈದಿದ್ದಾರೆ.

- Advertisement -

ಪರೀಕ್ಷೆಗೆ ಹಾಜರಾದ ಒಟ್ಟು 16 ವಿದ್ಯಾರ್ಥಿಗಳಲ್ಲಿ ಐದು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , ತೇರ್ಗಡೆಯಾಗಿದ್ದಾರೆ. ಅಲಾ ಫಾತಿಮಾ 586 (ಶೇ.93.76), ಆಯಿಷಾ ಮುಶ್ರೀಫ 566 (ಶೇ. 90.56), ಖತೀಜತ್ ಶೈಫಾ 545 (ಶೇ. 87.2), ಎಝಾ ಆಲಂ 544 (ಶೇ.87.04), ಖತೀಜಾ ಲೈಝಾ 540 (ಶೇ. 86.4) ಅಂಕ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರನ್ನು ಮತ್ತು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಅಧ್ಯಕ್ಷರು, ಉಪಾಧ್ಯಕ್ಷರು ಅಭಿನಂದಿಸಿದ್ದಾರೆ.

Join Whatsapp
Exit mobile version