Home ಟಾಪ್ ಸುದ್ದಿಗಳು ಎಸ್ಎಸ್ಎಲ್ ಸಿ, ಪಿಯುಸಿ ನಕಲಿ ಅಂಕಪಟ್ಟಿ ವಿತರಿಸಿ ವಂಚನೆ: ಮೂವರು ಸೆರೆ

ಎಸ್ಎಸ್ಎಲ್ ಸಿ, ಪಿಯುಸಿ ನಕಲಿ ಅಂಕಪಟ್ಟಿ ವಿತರಿಸಿ ವಂಚನೆ: ಮೂವರು ಸೆರೆ

ಬೆಂಗಳೂರು: ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ (ಕೆಐಓಎಸ್) ಎಂಬ ಸಂಸ್ಥೆಯ ಹೆಸರಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ರಾಜ್ಯಾದ್ಯಂತ ಸ್ಟಡಿ ಸೆಂಟರ್ ಗಳ ಮೂಲಕ ವಿತರಣೆ ಮಾಡುತ್ತಿದ್ದ ಮೂವರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರದ ಪ್ರಭುರಾಜ್ (36)ಜರಗನಹಳ್ಳಿಯ ಎಂಎಸ್ ಲೇಔಟ್ ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46)ಹಾಗೂ ಅರಕೆರೆಯ ಡಾಕ್ಟರ್ ಲೇಔಟ್ ಮೊಹಮ್ಮದ್ ತೈಹೀಬ್ (31)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಬಂಧಿತರಿಂದ 10ನೇ ಮತ್ತು 12ನೇ ತರಗತಿಗೆ ಸಮಾನವಾದ ಎಂದು ನಮೂದಿಸಿರುವ ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ (ಕೆಐಓಎಸ್) ಸರ್ಟಿಫಿಕೇಟ್ ವಿದ್ಯಾರ್ಥಿ ನೊಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮತ್ತು ಇತರ ಮಾಹಿತಿಗಳು, ವಿಷಯಗಳ ಅಂಕಗಳನ್ನು ನಮೂದಿಸಿರುವ 70 ಅಂಕಪಟ್ಟಿಗಳು ನೊಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ನಮೂದಿಸಿ, ಅಂಕಗಳನ್ನು ನಮೂದಿಸದ 190 ಅಂಕಪಟ್ಟಿಗಳು ವಿದ್ಯಾರ್ಥಿಗಳ ಹೆಸರು ಮತ್ತು ಯಾವುದೇ ಮಾಹಿತಿ ಇಲ್ಲದೆ ಖಾಲಿ ಇರುವ 7100 ಅಂಕಪಟ್ಟಿಗಳು,ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊಡುವ 5500 ಉತ್ತರ ಪತ್ರಿಗಳು,ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡಿರುವ ಬಗ್ಗೆ 25 ಅಡ್ಮಿಷನ್ ರಿಜಿಸ್ಟರ್ ಗಳನ್ನು ಜಪ್ತಿ ಮಾಡಲಾಗಿದೆ.

ನಕಲಿ ಮಾರ್ಕ್ಸ್ ಕಾರ್ಡ್‌ ಗಳನ್ನು ಮುದ್ರಿಸಲು  ತೆಗೆಯಲು ಬಳಸುತ್ತಿದ್ದ ಕಲರ್ ಪ್ರಿಂಟ್ ಕಂ. ಜೆರಾಕ್ಸ್ ಮೇಷಿನ್,4 ಲ್ಯಾಪ್‍ ಟಾಪ್‍ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಕಳೆದ ಜ.19 ರಂದು ಸಚಿನ್.ಸಿ ಎನ್ನುವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈ.ಇ.ಟಿ ಸ್ಕೂಲಿನ ಸಂಸ್ಥಾಪಕರಾದ ಮೈಲಾರಿ ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದು, ಅದರಂತೆ  ಕಲಂ:465, 468, 471, 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಮೇಲಾಧಿಕಾರಿಗಳ ಆದೇಶದಂತೆ ಕೇಸಿನ ಕಡತವನ್ನು ಸಿಸಿಬಿ ಪೊಲೀಸರು ತನಿಖೆ ಸಲುವಾಗಿ ಪಡೆದು ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ವೈಟಿಟಿ ಇನ್ಸ್‍ಟಿಟ್ಯೂಷನ್‍ ನ ಸಂಸ್ಥಾಪಕ, ಇಗ್ ನೈಟ್ ಗ್ರೂಪ್ ಆಫ್ ಇನ್ಸಿಟ್ಯೂಟ್‍ ನ  ಸಂಸ್ಥಾಪಕರಾದ ಮೂವರನ್ನು ಬಂಧಿಸಿ ಕಾರ್ಯಾಚರಣೆ ಕೈಗೊಂಡು ಸಂಬಂಧಿಸಿದ ಬಿ.ಎ. ಪದವಿಯ 3 ನಕಲಿ ಅಂಕಪಟ್ಟಿಗಳು,

ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್

ಸಂಸ್ಥೆಗೆ ಸೇರಿದ ಒಟ್ಟು 14 ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ತತ್ಸಮಾನ ತರಗತಿಯ ನಕಲಿ ಅಂಕಪಟ್ಟಿಗಳನ್ನು ಅಲ್ಲದೆ ಇತರ ಯೂನಿವರ್ಸಿಟಿಯ ಸೇರಿದ 4 ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಿ‌ ತನಿಖೆ ಮುಂದುವರಿಸಿದ್ದು ತನಿಖೆಯ ವೇಳೆ ಆರೋಪಿಗಳು ನೂರಾರು ವಿದ್ಯಾರ್ಥಿಗಳಿಗೆ

ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ ಸಂಸ್ಥೆಯ ಸಂಸ್ಥಾಪಕರಿಂದ ಅಂಕಪಟ್ಟಿಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ ಸಂಸ್ಥೆ ಮತ್ತು ಸಂಸ್ಥಾಪಕರ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಚಾರಿಸಿದಾಗ  ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಮ್ಮಿಂದ ಇಂತಹ ಯಾವುದೇ ಸಂಸ್ಥೆಗೆ ಮಾನ್ಯತೆ ಮತ್ತು  ಅನುಮತಿ ನೀಡಿರುವುದಿಲ್ಲ ಎಂದು ಮಾಹಿತಿಯನ್ನು ನೀಡಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಕರ್ನಾಟಕ ಸರ್ಕಾರರವರು ನಾವು

ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ ವತಿಯಿಂದ ಯಾವುದೇ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಮತ್ತು ಈ ರೀತಿ ಪರೀಕ್ಷೆ ನಡೆಸುವುದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆ-1966 ರಂತೆ ಅಪರಾಧವಾಗಿರುತ್ತದೆ ಎಂದು ಮಾಹಿತಿ ನೀಡಿರುತ್ತಾರೆ.

  ಮೇಲಾಧಿಕಾರಿಗಳ ಆದೇಶದಂತೆ ಮಾನ್ಯ ನ್ಯಾಯಾಲಯದಲ್ಲಿ ಕರ್ನಾಟಕ ಇನ್ಸ್ ಸ್ಟಿಟ್ಯೂಶನ್ ಆಫ್ ಸ್ಕೂಲಿಂಗ್ ನ ಹುಬ್ಬಳ್ಳಿಯ ವಿದ್ಯಾನಗರ ಪ್ರಶಾಂತ್ ಕಾಲೋನಿ ಕಚೇರಿಯಲ್ಲಿ ಶೋಧನೆಯನ್ನು ನಡೆಸಲು ಶೋಧನಾ ವಾರೆಂಟ್ ಪಡೆದು,ಕಳೆದ ಏ.15 ರಂದು ಸದರಿ ಕಚೇರಿಯ ಮೇಲೆ ದಾಳಿ ನಡೆಸಿ, ಶೋಧನೆ ಮಾಡಲಾಗಿ, ಸಂಸ್ಥೆಯ ಸಂಸ್ಥಾಪಕರು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ವಿವಿಧ ಸ್ಟಡಿ ಸೆಂಟರ್ ಗಳ ಮೂಲಕ 10 ಮತ್ತು 12 ನೇ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿಸಿಕೊಂಡು, ಪರೀಕ್ಷೆ ನಡೆಸಿ ತಮ್ಮ ಕಚೇರಿಯಲ್ಲಿಯೇ ಅಂಕಪಟ್ಟಿಗಳನ್ನು ತಯಾರು ಮಾಡಿ, ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ದಪಡಿಸಿ ಇಟ್ಟುಕೊಂಡಿರುವುದು ಕಂಡು ಬಂದಿದೆ.

ಸರ್ಕಾರವು ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖಾಂತರ 10 ಹಾಗೂ ಇತರೆ 12 ನೇ ತರಗತಿ ಪರೀಕ್ಷೆ ನಡೆಸಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ರೀತಿಯಲ್ಲಿ ಏIಔS ಸಂಸ್ಥೆಯ ಸಂಸ್ಥಾಪಕರು, ಸರ್ಕಾರಕ್ಕೆ ಸಮಾಂತರವಾಗಿ ತನ್ನ ಸಂಸ್ಥೆಯಿಂದ 10 ಮತ್ತು 12 ನೇ ತರಗತಿಯ ಅಂಕಪಟ್ಟಿಗಳನ್ನು ಯಾವುದೇ ಅನುಮತಿಯಿಲ್ಲದೆ ಸ್ವತಃ ತಯಾರು ಮಾಡಿ ವಿತರಣೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದರು.

Join Whatsapp
Exit mobile version