Home ಟಾಪ್ ಸುದ್ದಿಗಳು SSLC ಫಲಿತಾಂಶ: ಅಡ್ಯನಡ್ಕದ ಆಶೂರಾಗೆ 625ರಲ್ಲಿ 612 ಅಂಕ

SSLC ಫಲಿತಾಂಶ: ಅಡ್ಯನಡ್ಕದ ಆಶೂರಾಗೆ 625ರಲ್ಲಿ 612 ಅಂಕ

ಬಂಟ್ವಾಳ: ಕೇಪು ಗ್ರಾಮದ ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಶೂರಾ ಎಂ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 612 ಅಂಕಗಳನ್ನು ಪಡೆಯುವ ಮೂಲಕ ಶೇ 97.92 ಸಾಧನೆ ಮಾಡಿ ಶಾಲೆಗೆ ಟಾಪರ್ ಎನಿಸಿಕೊಂಡಿದ್ದಾರೆ.


ಪುಣಚ ಗ್ರಾಮದ ಮೂಡಂಬೈಲು ಬೈರಿಕಟ್ಟೆಯ ರಿಕ್ಷಾ ಚಾಲಕ ಮುಹಮ್ಮದ್ ಮತ್ತು ಆಯಿಷಾ ದಂಪತಿ ಪುತ್ರಿ ಆಶೂರಾ ಹಿಂದಿಯಲ್ಲಿ 100ರಲ್ಲಿ 100 ಅಂಕ ಪಡೆದಿದ್ದಾಳೆ. ಕನ್ನಡ 125ರಲ್ಲಿ 123, ಇಂಗ್ಲಿಷ್ 98, ಗಣಿತ 96, ವಿಜ್ಞಾನ 98, ಸಮಾಜ ವಿಜ್ಞಾನ 97 ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕಠಿಣ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.

Join Whatsapp
Exit mobile version