ಚಿಕ್ಕಮಗಳೂರು: ನೇರಳಕುಡಿಗೆಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಬದಲಿ ಮಾರ್ಗದ ರಸ್ತೆಗೆ ಅಳವಡಿಸಿರುವ ಕಬ್ಬಿಣ ಚೌಕಟ್ಟಿನ ಎತ್ತರವು ಕಡಿಮೆಯಾಗಿರುವ ಕಾರಣ ವಾಹನಗಳಿಗೆ ಓಡಾಡಲು ತೊಡಕು ಉಂಟಾಗಿದ್ದು, ಕೂಡಲೇ ಕ್ರಮವಹಿಸಬೇಕು’ ಎಂದು ಶೃಂಗೇರಿ ತಾಲೂಕು ಜೆಡಿಎಸ್ ಅಧ್ಯಕ್ಷ ಟಿ.ಟಿ ಕಳಸಪ್ಪ ಒತ್ತಾಯಿಸಿದ್ದಾರೆ.
ಶೃಂಗೇರಿ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ತುರ್ತು ಚಿಕಿತ್ಸಾ ವಾಹನ, ಕಮಾನು ಇರುವ ಆಟೊ, ಗೂಡ್ಸ್ ಹಾಗೂ ಪ್ರವಾಸಿ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಕಬ್ಬಿಣದ ಚೌಕದ ಎತ್ತರ ಕಡಿಮೆ ಇರುವುದರಿಂದ ಮೂರು ಅಡಿ ಹೆಚ್ಚಿಸಬೇಕು. ಲೋಕೋಪಯೋಗಿ ಅಧಿಕಾರಿಗಳು ಮತ್ತೊಮ್ಮೆ ಸ್ಥಳ ಪರಿಶೀಲಿಸಿ, ಮರುಳು ಚೀಲದಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಡಾ.ಅಣ್ಣಾದೊರೈ, ಎಚ್.ಜಿ ದೇವೇಂದ್ರ, ಇಬ್ರಾಹಿಂ, ಕೃಷ್ಣಮೂರ್ತಿ, ಶೈಲೇಶ್ ಉಪಸ್ಥಿತರಿದ್ದರು.