Home ಟಾಪ್ ಸುದ್ದಿಗಳು ಶ್ರೀನಗರ: ಭಯೋತ್ಪಾದಕ ಎಂದು ಭಾವಿಸಿ ಸಹೋದ್ಯೋಗಿಗೆ ಗುಂಡಿಕ್ಕಿದ ಪೊಲೀಸ್‌ ಅಧಿಕಾರಿ

ಶ್ರೀನಗರ: ಭಯೋತ್ಪಾದಕ ಎಂದು ಭಾವಿಸಿ ಸಹೋದ್ಯೋಗಿಗೆ ಗುಂಡಿಕ್ಕಿದ ಪೊಲೀಸ್‌ ಅಧಿಕಾರಿ

ಶ್ರೀನಗರ: ಪೊಲೀಸ್ ಒಬ್ಬರು ತನ್ನ ಸಹೋದ್ಯೋಗಿಗೆ ಭಯೋತ್ಪಾದಕ ಎಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿದ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಗರ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಲೌಡ್ ಸ್ಪೀಕರ್ ನಲ್ಲಿ ಕೂಗಿ ಹೇಳಲಾಗಿತ್ತು. ಆದರೆ ಮೃತಪಟ್ಟ ಪೊಲೀಸ್ ಇದಕ್ಕೆ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರಿಂದ ಭಯೋತ್ಪಾದಕನೇ ಇರಬೇಕೆಂದು ಭಾವಿಸಿ ಫೈರಿಂಗ್ ಮಾಡಿದ್ದರಿಂದ ಈ ಘಟನೆ ನಡೆದಿದೆ.

Join Whatsapp
Exit mobile version