Home ಟಾಪ್ ಸುದ್ದಿಗಳು ಶ್ರೀಲಂಕಾದಲ್ಲಿ ಪ್ರತಿ ಕೆಜಿ ಗೋಧಿ ಹಿಟ್ಟಿಗೆ 400 ರೂ. : ಬ್ರೆಡ್ಡಿಗೂ ಪರದಾಡಿದ ಜನತೆ!

ಶ್ರೀಲಂಕಾದಲ್ಲಿ ಪ್ರತಿ ಕೆಜಿ ಗೋಧಿ ಹಿಟ್ಟಿಗೆ 400 ರೂ. : ಬ್ರೆಡ್ಡಿಗೂ ಪರದಾಡಿದ ಜನತೆ!

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅರಾಜಕತೆಗೆ ಶ್ರೀಲಂಕಾ ತತ್ತರಿಸಿದ್ದು, ಪ್ರತಿ ಕೆಜಿ ಗೋಧಿ ಹಿಟ್ಟಿಗೆ ಬರೋಬರಿ 400 ರೂ. ವ್ಯಯಿಸಬೇಕಾಗಿರುವ ಅಲ್ಲಿನ ಜನತೆ ಒಂದು ತುಂಡು ಬ್ರೆಡ್ಡಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಶ್ರೀಲಂಕಾ ಜನರೆ ಅನ್ನ, ನೀರು, ಅಗತ್ಯ ವಸ್ತುಗಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.

ಒಂದು ದಿನದ ಅಂತರಲ್ಲಿ ಪ್ರತಿ ಕೆಜಿ ಗೋಧಿ ಹಿಟ್ಟಿಗೆ ಸುಮಾರು 32 ರೂ. ಏರಿಕೆಯಾಗಿದೆ. ಅಲ್ಲದೆ 10 ರೂ. ಸೇಲ್ ಆಗುತ್ತಿದ್ದ 450 ಗ್ರಾಂ ಬ್ರೆಡ್ಡಿನ ಪ್ಯಾಕೆಟ್ 20 ರೂ.ಗೆ ಮಾರಾಟವಾಗಿ ಜನತೆಯನ್ನು ಕಂಗೆಡಿಸಿದೆ.

ಈ ಹಿಂದೆ ಪ್ರತಿ ಕೆಜಿ ಗೋಧಿ ಹಿಟ್ಟು 84 ರೂ.ಗೆ ಮಾರಾಟವಾಗುತ್ತಿದ್ದು, ಹಿಟ್ಟಿನ ಬೆಲೆಯೇರಿಕೆಯಿಂದಾಗಿ ಬ್ರೆಡ್ಡಿನ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಸಿಲೋನ್ ಬೇಕರಿ ಮಾಲಕರ ಸಂಘದ ಅಧ್ಯಕ್ಷ ಎನ್.ಕೆ. ಜಯವರ್ಧನ್ ತಿಳಿಸಿದ್ದಾರೆ.

Join Whatsapp
Exit mobile version