ಎರಡು ವಾರ ಶ್ರೀಲಂಕಾ ಬಂದ್: ತುರ್ತು ಸೇವೆಗಳು ಮಾತ್ರ ಲಭ್ಯ

Prasthutha|

ಕೊಲಂಬೋ: ಶ್ರೀಲಂಕಾ ಮತ್ತೆ ಎರಡು ವಾರ ಬಂದ್ ಆಗಲಿದೆ. ದೇಶದಲ್ಲಿ ತೈಲ ಸಂಗ್ರಹ ಅತ್ಯಂತ ವೇಗವಾಗಿ ಕಡಿಮೆ ಆಗುತ್ತಿದ್ದು ಇರುವ ತೈಲವನ್ನು ತುರ್ತು ಸೇವೆಗಳಿಗೆ ಬಳಸಿಕೊಳ್ಳುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.

- Advertisement -

ಶಾಲೆ-ಕಾಲೇಜ್‍ಗಳು ಬಂದ್ ಆಗಿವೆ. ತುರ್ತು ಸೇವೆಗಳನ್ನು ಒದಗಿಸುವ ಸರ್ಕಾರಿ ಕಚೇರಿಗಳಷ್ಟೇ ಓಪನ್ ಆಗಿವೆ. ಆಸ್ಪತ್ರೆಗಳು ಮತ್ತು ಕೊಲಂಬೋ ನೌಕಾನೆಲೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪೆಟ್ರೋಲ್ ಬಂಕ್‍ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಸರಕಾರಿ ಉದ್ಯೋಗಿಗಳಿಗೆ ಎರಡು ವಾರಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ

ದೇಶದ ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಕಾರರು, ಅಧ್ಯಕ್ಷರ ಸಚಿವಾಲಯದ ಎಲ್ಲಾ ಪ್ರವೇಶದ್ವಾರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೌದ್ಧ ಧರ್ಮದ ಗುರು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp