Home ಟಾಪ್ ಸುದ್ದಿಗಳು ಹಣದ ಕೊರತೆ: ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ

ಹಣದ ಕೊರತೆ: ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ

ಕೊಲಂಬೊ: ಹಣದ ಕೊರತೆಯ ಪರಿಣಾಮ ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಚುನಾವಣೆಗಳನ್ನು ಮುಂದೂಡಿದೆ ಎಂದು ಶ್ರೀಲಂಕಾದ ಸುಪ್ರೀಂಕೋರ್ಟ್ ಗೆ ಚುನಾವಣೆ ಆಯೋಗ ಮಾಹಿತಿ ನೀಡಿದೆ.


ಬ್ಯಾಲೆಟ್ ಪೇಪರ್ ಮುದ್ರಣ, ಇಂಧನ ಹಾಗೂ ಭದ್ರತಾ ವ್ಯವಸ್ಥೆಗೆ ಬೇಕಾಗಿರುವ ಹಣವನ್ನು ನೀಡಲು ಸರ್ಕಾರದಲ್ಲಿ ಹಣವಿಲ್ಲವೆಂದು ಹಣಸಕಾಸು ಇಲಾಖೆ ತಿಳಿಸಿದೆ.


ಸಂಬಳ, ಪಿಂಚಣಿ ಮತ್ತು ಅಗತ್ಯ ಸೇವೆಗಳನ್ನೇ ನೀಡಲು ಹಣ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸುವುದು ಅಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕಳೆದ ವರ್ಷ ರಾಷ್ಟ್ರೀಯ ಆರ್ಥಿಕ ದಿವಾಳಿತನದ ವಿರುದ್ಧ ಜನರು ನಡೆಸಿದ ಭಾರೀ ಪ್ರತಿಭಟನೆ ಬಳಿಕ ರಾನಿಲ್ ವಿಕ್ರಮ ಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Join Whatsapp
Exit mobile version