Home ಟಾಪ್ ಸುದ್ದಿಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ; ಬೃಹತ್ ಮೊತ್ತದ ಇಂಧನವನ್ನು ಪೂರೈಕೆ ಮಾಡಿದ ಭಾರತ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ; ಬೃಹತ್ ಮೊತ್ತದ ಇಂಧನವನ್ನು ಪೂರೈಕೆ ಮಾಡಿದ ಭಾರತ

ಕೊಲಂಬೊ: ಭಾರತವು ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಹೆಚ್ಚು ಅಗತ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಸರಕುಗಳನ್ನು ಒದಗಿಸಿದೆ.

ಭಾರತ ಸರ್ಕಾರ ಶ್ರೀಲಂಕಾಗೆ ಸುಮಾರು 76 ಸಾವಿರ ಟನ್ ಇಂಧನವನ್ನು ಪೂರೈಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಟ್ವೀಟ್  ಮಾಡಿದ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು “ಕಳೆದ 24 ಗಂಟೆಗಳಲ್ಲಿ 36,000 MT ಪೆಟ್ರೋಲ್ ಮತ್ತು 40,000 MT ಡೀಸೆಲ್ ಅನ್ನು ಶ್ರೀಲಂಕಾಕ್ಕೆ ತಲುಪಿಸಲಾಗಿದೆ. ಭಾರತದ ನೆರವಿನೊಂದಿಗೆ ವಿವಿಧ ರೀತಿಯ ಇಂಧನದ ಒಟ್ಟು ಪೂರೈಕೆಯು ಈಗ 270,000 MT ಗಿಂತಲೂ ಹೆಚ್ಚಿದೆ” ಎಂದು ಹೇಳಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಧನ,ಆಹಾರದ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತದಿಂದಾಗಿ ಶ್ರೀಲಂಕಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಬಂದೆರಗಿದೆ.
 

Join Whatsapp
Exit mobile version